ರಾಮದುರ್ಗ

ಜಮೀನು ರಸ್ತೆ ಅಭಿವೃದ್ದಿಗಾಗಿ ರೂ. 6.30 ಕೋಟಿ ಹಣ ಮಂಜೂರು: ಶಾಸಕ ಮಹಾದೇವಪ್ಪ ಯಾದವಾಡ

ಜಮೀನು ರಸ್ತೆ ಅಭಿವೃದ್ದಿಗಾಗಿ ರೂ. 6.30 ಕೋಟಿ ಹಣ ಮಂಜೂರು: ಶಾಸಕ ಮಹಾದೇವಪ್ಪ ಯಾದವಾಡ

ರಾಮದುರ್ಗ ಅಕ್ಟೋಬರ್ 03: ಗ್ರಾಮಗಳ ಜಮೀನು ರಸ್ತೆಗಳು ರೈತ ಸಮುದಾಯದ ಜೀವಾಳವಾಗಿವೆ, ರಸ್ತೆಗಳ ನಿಮರ್ಾಣ ಮಾಡುವ ಹಂತದಲ್ಲಿ ಆ ಭಾಗದ ರೈತರು ಜಾಗರೂಕತೆಯಿಂದಾ ಉಸ್ತುವಾರಿ ಮಾಡಿ ಗುಣಾತ್ಮಕ ಕೆಲಸ ಮಾಡಿಸಲು ಶ್ರಮಿಸಬೇಕು ನೀರಾವರಿ ನಿಗಮದಿಂದ ಗ್ರಾಮದ ಜಮೀನು ರಸ್ತೆ ಅಭಿವೃದ್ದಿಗಾಗಿ ಸುಮಾರು ರೂ. 6.30 ಕೋಟಿ ಹಣ ಮಂಜೂರ ಮಾಡಿಸಿ ಜಮೀನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ತಾಲೂಕಿನ ಹುಲಕುಂದ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅಡಿಯಲ್ಲಿ ಕಳ್ಳಿಗುದ್ದಿ ಮುಖ್ಯ ಕಾಲುವೆ 4.00 ಕಿಮಿ ದಿಂದ ಹುಲಕುಂದ ಗ್ರಾಮಕ್ಕೆ ಹೋಗುವ ರಸ್ತೆ ಸುಧಾರಣೆಗೆ ರೂ. 50 ಲಕ್ಷ, ಹುಲಕುಂದ ಮನ್ನಿಕೇರಿ ರಸ್ತೆ ಸುಧಾರಣೆಗೆ ರೂ. 80 ಲಕ್ಷ, ಹುಲಕುಂದ ಶಾಖಾ ಕಾಲುವೆಯಿಂದಾ ಕುನ್ನಾಳ ಕ್ರಾಸ್ ರಸ್ತೆ ಸುಧಾರಣೆಗೆ ರೂ. 20 ಲಕ್ಷ, ಬಾಗೋಜಿಕೊಪ್ಪದಿಂದಾ ವಿತರಣಾ ಕಾಲುವೆ ಸಂಖ್ಯೆ 14 ರವರೆಗೆ ರಸ್ತೆ ಸುಧಾರಣೆಗೆ ರೂ. 1.80 ಕೋಟಿ, ಕೌಜಲಗಿಯಿಂದಾ ಬಾಗೋಜಿಕೊಪ್ಪಕ್ಕೆ ಹೋಗುವ ರಸ್ತೆ ಸುಧಾರಣೆಗೆ ರೂ.1 ಕೋಟಿ, ಮುರಕಟ್ನಾಳದಿಂದಾ ಇಟ್ನಾಳವರೆಗೆ ರಸ್ತೆ ಸುಧಾರಣೆಗೆ ರೂ. 80 ಲಕ್ಷ, ಗುದಗೊಪ್ಪ ಕ್ರಾಸ್ದಿಂದಾ ಹೊಸುರ ರಸೆ ಸುಧಾರಣೆಗೆ ರೂ. 1 ಕೋಟಿ, ಹೊಸುರ ಚಂದರಗಿ ಕ್ರಾಸ್ದಿಂದಾ ಹೊಸುರ ಎಮ್ಐ ಟ್ಯಾಂಕ್ ವರೆಗೆ ರಸ್ತೆ ಸುಧಾರಣೆಗೆ 20 ಲಕ್ಷ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಅವರು ಕಾಮಗಾರಿಗಳು ಕಳಪೆಯಾದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ನೀರಾವರಿ ನಿಗಮದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಕಾಮಗಾರಿ ತೃಪ್ತಿಯಾಗುವಂತೆ ಮಾಡಲು ಪದೆ ಪದೇ ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಲು ಸೂಚಿಸಿದರು. 

ಗುತ್ತಿಗೆದಾರರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಹೆದರದೇ ಅಧಿಕಾರಿಗಳು ಗುಣಾತ್ಮಕ ಕೆಲಸ ತಗೆದುಕೊಳ್ಳಬೇಕು ಒಂದು ವೇಳೆ ವಿನಾಕಾರಣ ಅಧಿಕಾರಗಳ ಮಾತನ್ನು ಗುತ್ತಿದಾರರು ಕೇಳದೆ ಕಾಮಗಾರಿ ನಿರ್ವಹಣೆ ಮಾಡಿದರೆ ನಮ್ಮ ಗಮನಕ್ಕೆ ತರಲು ತಿಳಿಸಿದ ಅವರು ಅಂತವರಿಗೆ ತಕ್ಕ ಬುದ್ದಿ ಕಲಿಸಿ, ಬಿಲ್ ತಡೆಹಿಯಲಾಗುವುದು ಎಂದು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸದಸ್ಯ ಮಾರುತಿ ತುಪ್ಪದ, ವೇಂಕಟೇಶ ಪಂಚಗಾವಿ, ಪ್ರಕಾಶ ಚವಲಿ, ನಾಡಗೌಡ್ರ. ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

 

ಸುದ್ದಿ ಓದಿ