ರೌಡಿ ಸ್ಕಾ-್ವಡನಿಂದ ರೌಡಿ ಜನರನ್ನು ಮುಂಜಾಗ್ರತಾ ಕ್ರಮವಾಗಿ ಪರೀಶೀಲನೆ
ಲೋಕದರ್ಶನ ವರದಿ
ಧಾರವಾಡ 04: ಧಾರವಾಡ ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ಪಟ್ಟಣ ಹಾಗೂ ಗ್ರಾಮಗಳಲ್ಲಿ ರೌಡಿ ಸ್ಕಾ-್ವಡದಿಂದ ಇಂದು (04) ಬೆಳಿಗ್ಗೆ ಜನರ ಮನೆಗಳಿಗೆ ಹೋಗಿ ಮುಂಜಾಗ್ರತಾ ಕ್ರಮವಾಗಿ ಪರೀಶೀಲನೆ ಮಾಡಲಾಗಿದೆ. ಪೊಲೀಸ್ ಅಧೀಕ್ಷಕರಾದ ಗುಂಜನ್ ಆರ್ಯ ಅವರ ಮಾರ್ಗದರ್ಶನದಂತೆ ಡಿ.ಎಸ್.ಪಿ. ಧಾರವಾಡ ಗ್ರಾಮೀಣ, ಸಿ.ಪಿ.ಐ., ಪಿ.ಐ ಹಾಗೂ ಪಿ.ಎಸ್.ಐ ಅವರು ಹಾಗೂ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮವಾಗಿ ಪರೀಶೀಲನೆ ಕೈಕೊಂಡಿದೆ. ಈ ಸಂದರ್ಭದಲ್ಲಿ ರೌಡಿ ಶೀಟರುಗಳ ಮನೆಗಳಲ್ಲಿ ಮಾರಕಾಸ್ತ್ರಗಳನ್ನು ಪರೀಶೀಲಿಸಲಾಯಿತು. ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 103 ಜನ ರೌಡಿ ಶೀಟರುಗಳ ಮನೆಗಳನ್ನು ತಪಾಸಣೆ ಮಾಡಿದ್ದು ಇರುತ್ತದೆ. ಸದರಿ ರೌಡೀಶೀಟರಗಳಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.