ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಉಳ್ಳಾಗಡ್ಡಿ ಖಾನಾಪುರ/ಬೆಳಗಾವಿ : ರವಿವಾರ ಸಂಜೆ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಉರ್ದು ಶಾಲೆಗಳ ಮೇಲಿನ ಮೇಲ್ಚಾವಣಿಯ ತಗಡುಗಳು ಹಾರಿ ಹೋಗಿದ್ದು, ಗ್ರಾಮಗಳಲ್ಲಿನ ಬಹುತೇಕ ವಿದ್ಯುತ್ ಕಂಬಗಳು ಹಾಗೂ ಮರಗಳು ಉರುಳಿ ಬಿದ್ದಿರುವ ಘಟನೆ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದಲ್ಲಿ ನಡೆದಿದೆ.
ಬರವಿವಾರ ಸಂಜೆ ಸುಮಾರಿಗೆ ಅರ್ಧ ಗಂಟೆ ಸುರಿದ ಭಾರಿ ಮಳೆ ಗಾಳಿಯಿಂದ ಸರಕಾರಿ ಶಾಲೆ ಮೇಲಿನ ತಗಡಿನ ಸೀಟ್‌ಗಳು ಗಾಳಿಯ ರಸಕ್ಕೆ ಸುಮಾರು ೬೦೦ರಿಂದ ೭೦೦ ಮೀಟರ್ ಅಂತರದಲ್ಲಿ ಹಾರಿ ಹೋಗಿ ಬಿದ್ದಿವೆ. ಗಾಳಿಯ ರಭಸಕ್ಕೆ ಗ್ರಾಮದಲ್ಲಿನ ಮುಖ್ಯ ರಸ್ತೆಯಲ್ಲಿರುವ ಅಮಿತ್ ಖಾನಾಪುರೆ ಎಂಬುವರಿಗೆ ಸೇರಿದ ಕಟಿಂಗ್ ಶಾಪ್ ಸಂಪೂರ್ಣ ಗಾಳಿಯ ರಭಸಕ್ಕೆ. ಹಾಳಾಗಿದ್ದು, ಗ್ರಾಮದಲ್ಲಿನ ಹೊರ ವಲಯದಲ್ಲಿರುವ ಹಲವಾರು ಗಿಡ ಮರಗಳು ಗಾಳಿಯ ರಬಸಕ್ಕೆ ನೆಲಕ್ಕೆ ಉರಿಳಿವೆ.
ಇನ್ನು ಗ್ರಾಮದ ಹಲವೆಡೆ ವಿದ್ಯುತ್ ಕಂಬಗಳು ಬಾಗಿ ನಿಂತಿವೆ. ಇದರಿಂದಾಗಿ ರವಿವಾರ ಸಂಜೆಯಿAದ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕೇವಲ ಅರ್ಧ ಗಂಟೆಗಳ ಕಾಲ ಸುರಿದ ಗಾಳಿ ಮಿಶ್ರಿತ ಮಳೆಯಿಂದ ಈ ಅವಘಡಗಳು ಸಂಭವಿಸಿವೆ.