ದರೋಡೆ, ಅತ್ಯಾಚಾರ ಪ್ರಕರಣದ ಆರೋಪಿತನ ಮೇಲೆ ಗುಂಡಿನ ದಾಳಿ : ಕಿತ್ತೂರು ಹೊರವಲಯದಲ್ಲಿ ಘಟನೆ

ದರೋಡೆ, ಅತ್ಯಾಚಾರ ಪ್ರಕರಣದ ಆರೋಪಿತನ ಮೇಲೆ ಗುಂಡಿನ ದಾಳಿ : ಕಿತ್ತೂರು ಹೊರವಲಯದಲ್ಲಿ ಘಟನೆ

ಬೆಳಗಾವಿ : ದರೋಡೆ, ಗ್ಯಾಂಗ್ ರೇಪ್, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿತನ ಕಾಲಿಗೆ ಗುಂಡೇಟು ನೀಡುವ ಮೂಲಕ ಆರೋಪಿತನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಿತ್ತೂರು ಹೊರವಲಯದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.

   ಎಸ್ ಪಿ ಗುಳೇದ ಅವರು ಈ ಕುರಿತು ಮಾಧ್ಯಮ ಗಳಿಗೆ ಮಾಹಿತಿ ನೀಡುತ್ತಾ, ಅತ್ಯಾಚಾರ, ದರೋಡೆ, ಸುಲಿಗೆ ಸೇರಿದಂತೆ ಅನೇಕ ಪ್ರಕರಣ ಗಳಲ್ಲಿ ಪ್ರಮುಖನಾಗಿದ್ದಆರೋಪಿ ರಮೇಶ್ ಕಿಲ್ಲಾರ್ ಈತನಿಗೆ ಶನಿವಾರ ಬೆಳಗಿನ ಜಾವ 6 ಗಂಟೆಗೆ ಕಿತ್ತೂರು ಪೊಲೀಸರು ಬಂಧಿಸಲು ಹೋದಾಗ ಈ ಘಟನೆ ನಡೆದಿದೆ. 

    ಪೊಲೀಸ್ ಪೊಲೀಸ್ ಪೇದೆ ಷರೀಫ್ ದಫೇದಾರ್ ಗೆ ಚಾಕು ಇರಿದು ಪರಾರಿಯಾಗುವ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಪಿಎಸ್‌ಐ ಪ್ರವೀಣ್ ಗೊಂಗೊಳ್ಳಿ ಎಚ್ಚರಿಕೆ ನೀಡಿದರೂ ಪೊಲೀಸರ ದಾಳಿ ಮಾಡಿ ತಪ್ಪಿಸಿಕೊಳ್ಳಲು ‌ಪ್ರಯತ್ನ ಮಾಡಿದ ಆರೋಪಿತ ರಮೇಶ ಕಾಲಿಗೆ ಗುಂಡೇಟು ನೀಡಿದ್ದಾರೆ.

    ಡಕಾಯಿತಿ, ದರೋಡೆ, ಸಾಮೂಹಿಕ ಅತ್ಯಾಚಾರ, ಅಕ್ರಮ ಶಸ್ತ್ರಾಸ್ತ್ರ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ರಮೇಶನಿಗೆ ಪೊಲೀಸರು ಗುಂಡಿನ ಏಟು ನೀಡಿದ್ದಾರೆ. ಗಾಯಗೊಂಡಿರುವ ಆರೋಪಿ ಹಾಗೂ ಪೊಲೀಸರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಎಸ್ಪಿ ಭೀಮಾಶಂಕರ ಗುಳೇದ ಅವರು ಮಾಹಿತಿ ನೀಡಿದ್ದಾರೆ.

ಸುದ್ದಿ ಓದಿ