ವರವಾಗಬೇಕಿದ್ದ ರಸ್ತೆ ವಿಭಜಕ ಶಾಪವಾಗಿ ಪರಿಣಮಿಸಿದೆ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ವರದಿ: ಹಣಮಂತ ನಾವಿ
ಮಹಾಲಿಂಗಪುರ: ಜನರಿಗೆ ವರವಾಗಬೇಕಿದ್ದ ರಸ್ತೆ ವಿಭಜಕ ಶಾಪವಾಗಿ ಪರಿಣಮಿಸಿದ್ದು, ಇದುವರೆಗೂ ನೂರಾರು ಅಪಘಾತಗಳು ಸಂಭವಿಸಿ ಸಾಕಷ್ಟು ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರೂ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮುಧೋಳದಿಂದ ರಬಕವಿ ಬನಹಟ್ಟಿ ಮುಖಾಂತರ ಸಾಂಗ್ಲಿ, ಮಿರಜ್ ಹಾಗೂ ಜಮಖಂಡಿ, ವಿಜಯಪುರ ಮತ್ತು ಗೋಕಾಕ, ಘಟಪ್ರಭಾ, ಬೆಳಗಾವಿ, ಕೊಲ್ಲಾಪುರ, ನಿಪ್ಪಾಣಿ ಕಡೆ ನಿತ್ಯವೂ ನೂರಾರು ವಾಹನಗಳು ಚಲಿಸುವ ಮುಧೋಳ ನಿಪ್ಪಾಣಿ ಹೆದ್ದಾರಿಯಲ್ಲಿ ಸ್ಥಳೀಯ ಅಷ್ಟಗಿ ಚಿತ್ರಮಂದಿರದ ಮುಂಭಾಗದಲ್ಲಿ ಅಪೋಲೋ ಮೆಡಿಕಲ್ ಸ್ಟೋರ್ ನ ಎದುರು ಆರಂಭವಾಗುವ ರಸ್ತೆ ವಿಭಜಕಕ್ಕೆ ಯಾವುದೇ ರೀತಿಯ ಸೂಚನಾ ಫಲಕವಾಗಲಿ, ವಿದ್ಯುತ್ ದೀಪಗಳಿಂದ ರಸ್ತೆ ವಿಭಜಕದ ತಿಳುವಳಿಕೆಯಾಗಲಿ ಮಾಡದಿರುವುದು.
ಬರುವ ವಾಹನ ಸವಾರರು ರಸ್ತೆ ವಿಭಜಕ ಅರಿಯದೆ ಇದುವರೆಗೂ ನೂರಾರು ಟ್ರ್ಯಾಕ್ಟರ್, ಕಾರು, ಲಾರಿ, ಬೈಕ್ ಮುಂತಾದ ವಾಹನಗಳು ಡಿಕ್ಕಿ ಹೊಡೆದು ಸಾಕಷ್ಟು ಅವಘಡಗಳು ಸಂಭವಿಸಿದ್ದು ಕೆಲವು ಅಪಘಾತಗಳು ಜನರ ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗಿದ್ದು ಅದು ಅಲ್ಲದೆ ಸಾಕಷ್ಟು ನಷ್ಟವು ಆಗಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಮೇ.24ರ ಶನಿವಾರ ರಾತ್ರಿಯೂ ಸಹ ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಅಪೋಲೋ ಮೆಡಿಕಲ್ಸ್ ಪಕ್ಕದಲ್ಲಿ ಅಪ್ಪಳಿಸಿದೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರು ಮೆಡಿಕಲ್ ಸ್ಟೋರ್ ಒಳಗೆ ನುಗ್ಗಿ ದೊಡ್ಡ ಅನಾಹುತ ಸಂಭವಿಸುವ ಸಂಭವವಿತ್ತು.
ಅದು ಅಲ್ಲದೆ ಇಲ್ಲಿ ಎಂಎ???ಎಲ್ ಬಾರ್, ಮೆಡಿಕಲ್ ಸ್ಟೋರ್ಸ್, ಕಟಿಂಗ್ ಶಾಪ್, ಖಾನಾವಳಿಗಳು, ಬಟ್ಟೆ ಅಂಗಡಿಗಳು ಮುಂತಾದ ವ್ಯಾಪಾರ ಮಳಿಗೆಗಳಿದ್ದು ಮತ್ತು ಮಹಾಲಿಂಗಪುರದ ಮುಖ್ಯ ಬಜಾರ ಜವಳಿ ಬಜಾರ್ ಗೆ ಹೋಗುವ ದಾರಿಯೂ ಇದೇ ಆಗಿರುವುದರಿಂದ ಇಲ್ಲಿ ಯಾವಾಗಲೂ ಸಾಕಷ್ಟು ಜನಸಂದಣಿ ಇದ್ದು ಜನರು ಕೈಯಲ್ಲಿ ಜೀವ ಹಿಡಿದು ಪ್ರಾಣಭಯದಿಂದ ಓಡಾಡುವಂತಾಗಿದೆ. ಹೀಗಿದ್ದರೂ ಇಲ್ಲಿ ರಸ್ತೆ ವಿಭಜಕ ಸೂಚನಾ ಫಲಕ ಹಾಕಿರದೆ ಸಾಕಷ್ಟು ಅಪಘಾತಗಳು ಸಂಭವಿಸಿದ್ದು ಅದೃಷ್ಟವಶಾತ್ ಇದುವರೆಗೂ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ ಕಬ್ಬು ಸಾಗಣೆ ಸಂದರ್ಭದಲ್ಲಿ ಸಾಕಷ್ಟು ಟ್ರಾಕ್ಟರ್ಗಳು ಸಹ ಈ ವಿಭಜಕಕ್ಕೆ ಢಿಕ್ಕಿ ಹೊಡೆದಿರುತ್ತದೆ ಇಷ್ಟೆಲ್ಲ ಅನಾಹುತ ಸಂಭವಿಸಿದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತು ಜಾಣ ಕುರುಡು ಪ್ರದರ್ಶಿಸುತ್ತಿದ್ದು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.