ಮಳೆಗೆ ಕುಸಿದ ರಸ್ತೆ : ಸಂಚಾರಕ್ಕೆ ತೊಂದರೆ
ಲೋಕದರ್ಶನ ವರದಿ
ಕುಕನೂರು 07: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಳೆದ ಕೆಲದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು ಹಲವಾರು ಅವಘಡಗಳನ್ನು ಸೃಷ್ಟಿಸಿದೆ.
ಬುಧವಾರ ತಡರಾತ್ರಿ ಸುರಿದ ಮಳೆಗೆ ದ್ಯಾಂಪುರ-ತೊಂಡಿಹಾಳ ಮಧ್ಯೆ ಬರುವ ಜಾಲಿಹಳ್ಳದ ಹತ್ತಿರದ ರಸ್ತೆಯು ಕುಸಿದಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಅಪಾಯಕ್ಕೆ ಎಡೆ ಮಾಡಿಕೊಡುವಂತೆ ಇದೆ. ಶೀಘ್ರದಲ್ಲಿ ಲೋಕಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಸರಿಪಡಿಸುವಂತೆ ರೈತರಾದ ಶರಣಪ್ಪ ಚಲವಾದಿ, ಈರಪ್ಪ ತೆಕ್ಕಲಕೋಟಿ ಆಗ್ರಹಿಸಿದ್ದಾರೆ