ರಾಮದುರ್ಗ

ರಸ್ತೆ ಸುಧಾರಣೆಯ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಿಲಾಗುವುದು: ಯಾದವಾಡ

ರಸ್ತೆ ಸುಧಾರಣೆಯ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಿಲಾಗುವುದು: ಯಾದವಾಡ

ರಾಮದುರ್ಗ ನವೆಂಬರ್ 24: ಮಲಪ್ರಭಾ ಪ್ರವಾಹದಿಂದಾ ಹಾನಿಗೋಳಗಾದ ರಾಮದುರ್ಗ-ಸವದತ್ತಿ ರಸ್ತೆ ಸುಧಾರಣೆಯ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೊಲ ಮಾಡಿಕೊಡಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. 

ಪಟ್ಟಣದ ಸಂಗೋಳ್ಳಿ ರಾಯಣ್ಣ ಸರ್ಕಲ ಹತ್ತಿರ ರಾಮದುರ್ಗ ಸವದತ್ತಿ ರಸ್ತೆ ಸುಧಾರಣೆ ರೂ. 84 ಲಕ್ಷ, ಹಲಗತ್ತಿಯಲ್ಲಿ ರಾಮದುರ್ಗ ತಾಲೂಕಿನ ಔರಾಧ- ಸದಾಶಿವಘಟ ರಾಜ್ಯ ಹೆದ್ದಾರಿಯ ತಡೆಗೊಡೆ ನಿಮರ್ಾಣ ಹಾಗೂ ಡಾಂಬರೀಕರಣಕ್ಕೆ ರೂ. 60 ಲಕ್ಷ ಹಾಗೂ ಚಿಕ್ಕೊಪ್ಪ- ಡಚಮ್ಮನಗರ ರಸ್ತೆ ಮಧ್ಯೆ ಸೇತುವೆ ನಿಮರ್ಾಣ ರೂ. 1.50 ಕೋಟಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಗುಣಾತ್ಮಕ ಕಾಮಗಾರಿ ಮಾಡಲು ಅಧಿಕಾರಿಗಳ ಸೇವೆಯು ಬಹು ಮುಖ್ಯವಾಗಿದೆ. ಇಲಾಖೆ ಅಧಿಕಾರಿಗಳು ಕಾಮಗಾರಿ ನಡೆದ ಸಂಧಂರ್ಬದಲ್ಲಿ ವಾರದಲ್ಲಿ ಕನಿಷ್ಠ ಮೂರು ಬಾರಿಯಾದರೂ ಭೇಟಿ ನೀಡಿ ಗುಣಮಟ್ಟವನ್ನು ಪರೀಕ್ಷೀಸುತ್ತಾ ಕೆಸಲವನ್ನು ತೆಗೆದುಕೊಳ್ಳಬೇಕು ಹಾಗೂ ಅಧಿಕಾರಿಗಳಿಗಳ ಮಾರ್ಗದರ್ಶನದಲ್ಲಿ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸಲಹೆ ನೀಡಿದರು. 

ಬಹಳ ದಿನಗಳ ಬೇಡಿಕೆಯಾಗಿದ್ದ ಚಿಕ್ಕೊಪ್ಪ ಮತ್ತು ಉಡಚಮ್ಮನಗರದ ರೈತರಿಗೆ ಜಮೀನುಗಳಿಗೆ ಸುಗಮ ಸಂಚಾರ ಮಾಡಲು ಅವಶ್ಯವಿರುವ ಸೇತುವೆ ನಿಮರ್ಾಣದ ಕಾಮಗಾರಿಯು ತಕ್ಷಣ ಪ್ರಾರಂಭವಾಗಲಿದೆ, ರೈತರು ಕಾಮಗಾರಿ ನಡೆದ ಸಮಯದಲ್ಲಿ ಸಹಕಾರಿ ನೀಡಿ ಉತ್ತಮ ಕೆಲಸವಾಗುವಂತೆ ನೋಡಿಕೊಳ್ಳಬೇಕು ಎಂದು ನುಡಿದರು. 

ಧನಲಕ್ಷ್ನೀ ಸಹಕಾರಿ ಸಕ್ಕರೆ ಕಾಖರ್ಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಪುರಸಭೆ ಅಧ್ಯಕ್ಷ ಶಂಕರ ಬನ್ನೂರ ಹಾಗೂ ಸದಸ್ಯರು, ಲೊಕೊಪಯೋಗಿ ಇಲಾಖೆ ಸಹಾಯಕ ಅಭಿಯಂತರಾದ ರವಿಕುಮಾರ, ಚೆನ್ನಪ್ಪ ಲಮಾಣಿ, ಗುತ್ತಿಗೆದಾರ ಜಯಣ್ಣ, ಪ್ರಕಾಶ ಚವಲಿ, ಮಲ್ಲನಗೌಡ ಸಂಖ್ಯಾಗೌಡಶಾನಿ ಹಾಗೂ ಗ್ರಾಮಸ್ಥರು ಹಾಜರಿದ್ದರು. 

 

ಸುದ್ದಿ ಓದಿ