ಪ್ರವಾಹ , ಕೊರೋನ ಪರಿಸ್ಥಿತಿ ಕುರಿತು ಪರಾಮರ್ಶೆ : ಬೊಮ್ಮಾಯಿ

ಪ್ರವಾಹ , ಕೊರೋನ ಪರಿಸ್ಥಿತಿ ಕುರಿತು ಪರಾಮರ್ಶೆ  : ಬೊಮ್ಮಾಯಿ

ಬೆಂಗಳೂರು, ಜುಲೈ 28  ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ನಂತರ ಸಚಿವ ಸಂಪುಟ ಸಭೆ ನಡೆಯಲಿದ್ದು ಬಳಿಕ  ರಾಜ್ಯದ ಪ್ರವಾಹ ಮತ್ತು ಕೊರೋನ  ಪರಿಸ್ಥಿತಿ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸುವುದಾಗಿ  ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
 
ಪ್ರಮಾಣ ವಚನಕ್ಕೆ  ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಂಪುಟ ಸಭೆ ನಂತರ ಹಿರಿಯ ಅಧಿಕಾರಿಗಳ ಸಭೆ  ನಡೆಸುವುದಾಗಿ ಹೇಳಿದರು.
ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು ನಿಗದಿಯಂತೆ ಇಂದು  11 ಗಂಟೆಗೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು ಸದ್ಯದ ಮಾಹಿತಿ ಪ್ರಕಾರ ಯಾರನ್ನು  ಸಂಪುಟಕ್ಕೆ  ತೆಗೆದುಕೊಳ್ಳಲಾಗುತ್ತಿಲ್ಲ   ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 

ಸುದ್ದಿ ಓದಿ