ರೇವತಗಾಂವ : ಶಾಲಾ ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆ
ಚಡಚಣ: ಕರ್ನಾಟಕ ಏಕೀಕರಣ ಚಳುವಳಿ 19ನೇ ಶತಮಾನದಲ್ಲಿ ಪ್ರಾರಂಭವಾಗಿ 1956 ರಾಜ್ಯ ಪುನರ್‌ವಿಂಗಡಣೆ ಕಾಯ್ದೆಯೊಂದಿಗೆ ಮುಕ್ತಾಯವಾಗಿ ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನವನ್ನು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ರಾಜ್ಯೋತ್ಸವವನ್ನು ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕ ಮೊದಲಿಗೆ ಮೈಸೂರು ಹೆಸರಿನಿಂದ ಗುರುತಿಸಿಕೊಂಡಿತ್ತು.
ಈ ಕನ್ನಡ ರಾಜ್ಯೋತ್ಸವದ ಸವಿನೆನಪಿಗಾಗಿ ‘ಕನ್ನಡ ಬೆಳಸಿ, ಕನ್ನಡ ಉಳಿಸಿ’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕರಾದ ಎಸ್.ಎಂ.ಮಾಳಿಯವರ ನೇತೃತ್ವದಲ್ಲಿ ಏರಿ್ಡಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲಿ ಭಾಗ್ಯಶ್ರೀ ನಿಂಬರಗಿ ಪ್ರಥಮ, ಅಂಕಿತಾ ಬಗಲಿ ದ್ವಿತೀಯ ಹಾಗೂ ರವಿ ಹಕ್ಕೆ ಹಾಗೂ ಕಾಂಚನಾ ಡೋಣಗಾಂವ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಇನ್ನೂಳಿದಂತೆ ಅಮಸಿದ್ದ ಉಪಾಸೆ, ಗಂಗಾಧರ ಜೀಗಜೇವಣಿ, ಮಲ್ಲಿಕಾರ್ಜುನ ಅಂಬಿಗೇರ, ಪ್ರಶಾಂತ ದಳವಾಯಿ, ಶಿವರಾಜ ಬರಗುಡಿ, ಕಲ್ಮೇಶ ನಡಗೇರಿ, ರಾಕೇಶ ಮಾಳಿ, ಸಲೀಂ ಹಳ್ಳಿ, ಸೌಂದರ್ಯ ಮೇತ್ರೆ, ಮಹಾದೇವಿ ಕುಂಬಾರ, ವೈಶಾಲಿ ಕೊಳುರಗಿ, ಪ್ರೀತಿ ಕಾಂಬಳೆನವರ, ಕಾಂಚನಾ ದೈವಾಡಿ, ಅಮೀರಬಾನು ಸುತಾರ, ವಿನಾಯಕ ಜೀರಂಕಲಗಿ ಸೇರಿದಂತೆ ಇತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.