ಸಿರುಗುಪ್ಪ

ತುಂಗಭದ್ರಾ ಡ್ಯಾಮ್ ನಿರ್ಬಂಧ ತೆರವು

ತುಂಗಭದ್ರಾ ಡ್ಯಾಮ್ ನಿರ್ಬಂಧ ತೆರವು

ಸಿರುಗುಪ್ಪ26:  ಹೊಸಪೇಟೆ ವಿಜಯ ನಗರ ದಲ್ಲಿನ ತುಂಗಭದ್ರಾ ಜಲಾಶಯದ ಪ್ರವೇಶಕ್ಕೆ ಸಾರ್ವಜನಿಕರಿಗೆ ವಿಧಿಸಿದ್ದ ನಿರ್ಬಂಧವನ್ನು ಜಿಲ್ಲಾ ಆಡಳಿತ ಶುಕ್ರವಾರದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ  ಎಂದು ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ತಿಳಿಸಿದರು .ಜಲಾಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆ ಯಾಗಿದ್ದರಿಂದ ಈ ಸಲ ಜುಲೈನಲ್ಲೇ ಜಲಾಶಯ ಭರ್ತಿ ಯಾ ಗಿತ್ತು ಕ್ರಸ್ಟ್‌ ಗೇಟ್ ಗಳಿಂದ ನೀರು ಹರಿಸಲಾಗಿತ್ತು ಇದನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು ಜಲಾಶಯಕ್ಕೆ ಭೇಟಿ ಕೊಡುತ್ತಿದ್ದರು ಅಂತರ ಮರೀಚಿಕೆ ಯಾಗಿತ್ತು . ಕೋವಿಡ್ -19ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಆಗಸ್ಟ್‌ 4ರಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು ಈಗ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಆದೇಶ ಹಿಂಪಡೆದಿದ್ದಾರೆ. (ಸೆ.25)ಪ್ರವಾಸಿಗರು ಜಲಾಶಯ ಉದ್ಯಾನವನಕ್ಕೆ ಭೇಟಿ ಕೊಡಬಹುದು ಜಿಲ್ಲಾಧಿಕಾರಿ ಪ್ರಕಟಿಸಿದ್ದಾರೆ ಎಂದು ಅಬ್ದುಲ್ ನಬಿ ತಿಳಿಸಿದರು 


ಸುದ್ದಿ ಓದಿ