ದೇಶ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸೈನಿಕರು, ಪೊಲೀಸರನ್ನು ಗೌರವಿಸಿ : ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿಕೆ:ಪುಲ್ವಾಮಾ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಮಹಾಲಿಂಗಪುರ 18: ದೇಶ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಸೈನಿಕರು ಮತ್ತು ಪೊಲೀಸರ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಹೆಮ್ಮೆ ಇರಬೇಕು, ಅದೇ ದೇಶಭಕ್ತಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.
ಶ್ರೀರಾಮ ಸೇನಾ ಹಿಂದುಸ್ತಾನ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪುಲ್ವಾಮಾದಲ್ಲಿ ಉಗ್ರರದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಮತ್ತು ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧುರೀಣರಾದ ಡಾ.ಎ. ಆರ್. ಬೆಳಗಲಿ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ಸುತ್ತಲಿನ ಗ್ರಾಮಗಳ ಹಾಲಿ ಮತ್ತು ಮಾಜಿ ಸೈನಿಕರನ್ನು ಒಂದೇ ವೇದಿಕೆಗೆ ಕರೆತಂದು ಅವರೆಲ್ಲರನ್ನೂ ಸನ್ಮಾನಿಸಿ ರಾಷ್ಟ್ರೇ್ರಮ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡಲಾಗುವುದೆಂದು ಹೇಳಿದರು.
ಸಂಘಟನೆಯ ಪ್ರಮುಖರಾದ ನಂದು ಗಾಯಕ್ವಾಡ ಮಾತನಾಡಿ, ಬ್ರಿಟಿಷರು ನಮಗೆ ಸುಖಾಸುಮ್ಮನೆ ಸ್ವಾತಂ?????? ಕೊಟ್ಟು ಹೋಗಲಿಲ್ಲ, ಲಕ್ಷಾಂತರ ವೀರಯೋಧರ ಹೋರಾಟಗಾರರ ಬಲಿದಾನ ಮತ್ತು ಅವರ ಕ್ಷಾತ್ರತೇಜಕ್ಕೆ ಹೆದರಿ ದೇಶವನ್ನು ಬಿಟ್ಟು ಹೋಗಿದ್ದಾರೆ. ಇದಕ್ಕೆ ನಿಜವಾದ ಹೀರೋಗಳೆಂದರೆ ನಮ್ಮ ಸೈನಿಕರು. ಆದ್ದರಿಂದ ದೇಶಕ್ಕೆ ಆಪತ್ತು ಒದಗಿದಾಗ ಹೋರಾಟಕ್ಕೆ ಸಿದ್ಧರಾಗಲು ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟದ ಮತ್ತು ಹೋರಾಟಗಾರರ ರೋಚಕ ಕಥನಗಳನ್ನು ಹೇಳಿ ಅವರಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸುವುದು ನಮ್ಮ- ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿದರು. ಸೈನಿಕರಾದ ಜಯರಾಮ ಗಸ್ತಿ, ಮಹಾದೇವ ಕರಿಗಾರ,ಕಾರ್ತಿಕ ಕಲಾಲ, ವಿಠ್ಠಲ ಮಾಲದಿನ್ನಿ, ಪೊಲೀಸ್ ಸಿಬ್ಬಂದಿಗಳಾದ ಎಸ್. ಬಿ. ಜೈನರ್, ಬಿ.ಎನ್.ಮಮದಾಪುರ, ರಾಘವೇಂದ್ರ ಕಾಂಬಳೆ ಇವರನ್ನು ಹಿಂದುಸ್ತಾನ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಹಾಗೂ ಸರ್ವ ಸದಸ್ಯರು ಸನ್ಮಾನಿಸಿದರು.
ಮುಖಂಡರಾದ ಶಿವಾನಂದ ಅಂಗಡಿ, ಶಿವಲಿಂಗ ಟರಕಿ, ಗಣೇಶ ಪೂಜಾರಿ ,ಹನುಮಂತ ಗಲಗಲಿ, ನಿಂಗಣ್ಣ ಸಂಕರೆಡ್ಡಿ, ಭೈರೇಶ ಆದೆಪ್ಪನವರ, ಬಸವರಾಜ ಮಡಿವಾಳ, ಆನಂದ ಪವಾರ, ಧರ್ಮರಾಜ ಪೂಜಾರಿ, ರಾಜು ಬಂಡಿವಡ್ಡರ, ಸೈದು ಪೂಜಾರ, ಚಂದ್ರು ಭಜಂತ್ರಿ ಪತ್ರಕರ್ತರಾದ ಶಂಕರ ಕಡಬಲ್ಲವರ ಇತರರು ಇದ್ದರು. ಶಿಕ್ಷಕ ರಾಘವೇಂದ್ರ ನೀಲಣ್ಣವರ ಸ್ವಾಗತಿಸಿ, ನಿರೂಪಿಸಿದರು.