ಬಸವಲಿಂಗೇಶ್ವರ ಕಾಲೋನಿಯಲ್ಲಿ ಪ್ರಾಥಮಿಕ ಶಾಲೆ ಆರಂಭಿಸುವಂತೆ ಮನವಿ.
ಯಲಬುರ್ಗಾ ಅಕ್ಟೋಬರ್ 05: ಪಟ್ಟಣದ ಬೇವೂರು ರಸ್ತೆಗೆ ಹೊಂದಿಕೊಂಡಿರುವ ಬಸವಲಿಂಗೇಶ್ವರ (ಆಶ್ರಯ) ಕಾಲೋನಿಯಲ್ಲಿ ಚಿಕ್ಕ ಮಕ್ಕಳ ವಿಧ್ಯಾಭ್ಯಾಸದ ದೃಷ್ಠಿಯಿಂದ ಕಾಲೋನಿಯಲ್ಲಿ ಒಂದ ರಿಂದ ಐದನೇ ತರಗತಿವರೆಗೂ ಶಾಲೆಗಳನ್ನು ಆರಂಭಿಸುವಂತೆ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ ಅವರಿಗೆ ವಾರ್ಡಿನ ಪಪಂ ಸದಸ್ಯ ಕಳಕಪ್ಪ ತಳವಾರ ಮನವಿ ಸಲ್ಲಿಸಿದರು.
ಪಟ್ಟಣದ ಬೇವೂರು ರಸ್ತೆಗೆ ಹೊಂದಿಕೊಂಡಿರುವ ಬಸವಲಿಂಗೇಶ್ವರ ಕಾಲೋನಿಯಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಕಾಲೋನಿಯಾಗಿದೆ. ಇಲ್ಲಿ ಮಕ್ಕಳು ಶಾಲೆಗೆ ಹೋಗಬೇಕಾದರೆ ಸುಮಾರು ಒಂದು ಕಿ.ಮೀ ಅಂತರದಲ್ಲಿ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇದರಿಂದ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಅದ್ದರಿಂದ ಕಾಲೋನಿಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ಒಂದರಿಂದ ಐದನೇ ತರಗತಿವರೆಗೂ ಶಾಲೆಗಳನ್ನು ಆರಂಭಿಸುವ ಮೂಲಕ ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡಿ. ಅಲ್ಲದೇ, ಕಾಲೋನಿಯನ್ನು ಸ್ಲಂ ಎಂದು ಘೋಷಣೆ ಮಾಡಿ, ಅಲ್ಲಿ ಸಿಸಿ ರಸ್ತೆ, ಚರಂಡಿ, ಶೌಚಾಲಯ, ಶುದ್ದ ಕುಡಿವ ನೀರಿನ ಘಟಕಗಳ ಅಗತ್ಯವಿದೆ. ಈ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಾಲೋನಿಗೆ ಕಲ್ಪಿಸಿಕೊಡುವಲ್ಲಿ ತಾವುಗಳು ಮುಂದಾಗುವAತೆ ಪಪಂ ಸದಸ್ಯ ಕಳಕಪ್ಪ ತಳವಾರ, ಶಾಸಕ ಹಾಲಪ್ಪ ಆಚಾರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಾಲೋನಿಯಲ್ಲಿ ಶಾಲೆಗಳನ್ನು ಆರಂಭಿಸುವಂತೆ ಸಲ್ಲಿಸಿದ ಮನವಿ ಅಗತ್ಯವಾಗಿದ್ದು, ಅಲ್ಲಿಯ ಮಕ್ಕಳ ಅನುಕೂಲಕ್ಕಾಗಿ ಸಂಬAದಿಸಿದ ಅಧಿಕಾರಿಗಳ ಜತೆ ಚರ್ಚಿಸಿ, ಕ್ರಮಕ್ಕೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕಾಲೋನಿಯ ಬಸವರಾಜ, ಶಿವು ಹಿರೇಮ್ಯಾಗೇರಿ, ಸಿದ್ದರಾಮಗೌಡ ಮಾಲಿಪಾಟೀಲ್, ಬಸವರಾಜ ಕಮ್ಮಾರ, ಸಿದ್ರಾಮಪ್ಪ ಹಿರೇಕುರಬರ, ಸೇರಿದಂತೆ ವಾರ್ಡಿನ ನಿವಾಸಿಗಳು ಭಾಗವಹಿಸಿದ್ದರು.