2018, 19 ಮತ್ತು 20ನೇ ಸಾಲಿನ ಬೆಳೆ ವಿಮಾ ಬಿಡುಗಡೆ ಮಾಡಬೇಕೆಂದು ಮನವಿ
ಹುನಗುಂಡಿ 14: ಹುನಗುಂಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ 2018, 2019 ಮತ್ತು 2020 ಸಾಲಿನ ಬೆಳೆ ವಿಮಾ ಬಿಡುಗಡೆ ಮಾಡಬೇಕೆಂದು ಗದಗ ಜಿಲ್ಲಾ ಬಿಜೆಪಿ ಎಸ್. ಟಿ ಮೋರ್ಚಾ ಅಧ್ಯಕ್ಷರಾದ ಬಸವಂತಪ್ಪ ಎಚ್. ತಳವಾರ ನೇತೃತ್ವದಲ್ಲಿ ರೋಣ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಬಸವಂತಪ್ಪ ತಳವಾರ ಹುನಗುಂಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ 2018, 2019 ಮತ್ತು 2020 ಸಾಲಿನ ಬೆಳೆ ವಿಮಾ ಬಿಟ್ಟು ಹೋಗಿದ್ದರಿಂದ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ರೀತಿಯಿಂದ ಬೆಳೆ ವಿಮಾ ಮೊತ್ತವನ್ನು ಹುನಗುಂಡಿ ಗ್ರಾಮದ ರೈತರಿಗೆ ಮಂಜೂರು ಮಾಡಿಸಿಕೊಡಬೇಕು ಎಂದು ವಿನಂತಿಸಿಕೊಂಡರು. ಎಲ್ಲಾ ತಾಲೂಕ ಗ್ರಾಮ ಪಂಚಾಯತಿ ಮಂಜೂರಾಗಿರುತ್ತದೆ. ಆದರೆ ಹುನಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಜೂರಾಗಿರುವುದಿಲ್ಲ. ಅಂದರೆ ಬಿಟ್ಟು ಹೋಗಿರುತ್ತದೆ. ಪುನಹ ಪರೀಶೀಲನೆ ಮಾಡಿ ಎಲ್ಲ ಹುನಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ರೈತರಿಗೆ 2018, 2019 ಮತ್ತು 2020 ಸಾಲಿನ ಬೆಳೆವಿಮೆಯನ್ನು ಮಂಜೂರು ಮಾಡಬೇಕೆಂದು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿ. ವಾಯ್. ಮಂಡಸೊಪ್ಪಿ, ಪಿ. ಎಸ್. ಸಾಲಿಮಠ, ಹೇಮಂತ ಬ. ಗೌಡರ, ರವಿ. ಹ. ಶಿಸ್ವಿನಹಳ್ಳಿ ಉಪಸ್ಥಿತರಿದ್ದರು.