ಯಲಬುರ್ಗಾದಲ್ಲಿ ಸರಳವಾಗಿ ಜರಗಿದ ರೇಣುಕಾ ದೇವಿ ಜಾತ್ರಾ ಮಹೋತ್ಸವ
ಯಲಬುರ್ಗಾ 28: ಪಟ್ಟಣದ ಒಂದನೇ ವಾರ್ಡಿನಲ್ಲಿ ಭರತ ಹುಣ್ಣಿಮೆ ನಿಮಿತ್ತ ರೇಣುಕಾದೇವಿ ಜಾತ್ರಾ ಮಹೋತ್ಸವವು ಶನಿವಾರ ಕೊವೀಡ್ ಹಿನ್ನಲೆಯಲ್ಲಿ ಸರಳವಾಗಿ ಜರಗಿತು.
ಇಲ್ಲಿಯ ಗಾಳೆಯರ ಓಣಿಯಲ್ಲಿರುವ ರೇಣುಕಾದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ದೇವಿಯ ಮೂರ್ತಿಗೆ ಗವಿಸಿದ್ದಯ್ಯ ಗವಿಮಠ ಇವರಿಂದ ರುದ್ರಾಭಿಷೇಕ, ಪೂಜಾ ಕಾರ್ಯ ನಡೆಯಿತು. ನಂತರ ದೇವಸ್ಥಾನದ ಅವರಣದಲ್ಲಿ ನಡೆದ ರೇಣುಕಾದೇವಿ ಮೂರ್ತಿಗೆ ಪೂಜೆ ಸಲ್ಲಿಸಿದ ಪಪಂ ಸದಸ್ಯರಾದ ಅಂದಯ್ಯ ಕಳ್ಳಿಮಠ, ಕಳಕಪ್ಪ ತಳವಾರ, ಕಲಾವತಿ ಮರದಡ್ಡಿ, ಹನಮಂತಪ್ಪ ಭಜಂತ್ರಿ, ಮಾತನಾಡಿ, ಸಂಸ್ಕಾರವಂತರಾಗಲು ಪ್ರತಿಯೊಬ್ಬರು ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು.
ಇಂದಿನ ದಿನಗಳಲ್ಲಿ ಸಂಸ್ಕೃತಿ ಆಚಾರ ವಿಚಾರಗಳ ನೆಲೆಗಟ್ಟಿನಲ್ಲಿ ಯಾರು ನೆಡೆದುಕೊಳ್ಳುತ್ತಿಲ್ಲ. ಶಕ್ತಿ ದೇವತೆಯಾಗಿರುವ ರೇಣುಕಾದೇವಿ ಅಸಂಖ್ಯಾತ ಭಕ್ತರು ಹೊಂದಿದ್ದಾರೆ. ಮನುಷ್ಯನಲ್ಲಿ ಭಕ್ತಿ ಭಾವ ಮೂಡುವಂತಾ ಕೆಲಸ ಆಗಬೇಕು. ಜಾತಿ ಮತ ಎನ್ನದೇ ಎಲ್ಲಾ ವರ್ಗದವರು ಇಂಥ ಧಾರ್ಮಿಕ ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದು ನಿಜಕ್ಕೂ ಸಂತಸದಾಯಕ.ಮ ಆದರೆ ದೇಶದಲ್ಲಿ ಕಾಣಿಸಿಕೊಂಡಿದ್ದ ಕೊವೀಡ್-19 ಹಿನ್ನಲೆಯಲ್ಲಿ ಸರ್ಕಾರದ ಆದೇಶನ್ವಯ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.
ಪಪಂ ಮಾಜಿ ಸದಸ್ಯ ಅಮರಪ್ಪ ಕಲಬುರ್ಗಿ, ಮುಖಂಡರಾದ ರಮೇಶ ಬೇಲೇರಿ, ಶಿವರಾಜ ಕುಂಬಾರ, ಆದೇಶ ಹುಬ್ಬಳ್ಳಿ, ಮಲ್ಲಪ್ಪ ಸುರಕೋಡ, ರಮೇಶ ಮುಧೋಳ, ಶಿವಪ್ಪ ಕುರಿ, ಕಲ್ಲಪ್ಪ ಕರಮುಡಿ, ಅಮರೇಶ ಹುಬ್ಬಳ್ಳಿ, ಚನ್ನಬಸಪ್ಪ, ಭೀಮಯ್ಯ, ಸಂಗಮೇಶ, ನಾಗಪ್ಪ, ನಾಗರಾಜ ವಾಲ್ಮೀಕಿ, ಚನ್ನಬಸಯ್ಯ ಜೆಡಮಠ, ಮಂಜು ಹೂಗಾರ, ಶ್ರೀಧರ ಸುರಕೋಡ, ಸೇರಿದಂತೆ ದೇವಸ್ಥಾನದ ಅಪಾರ ಭಕ್ತರು ಭಾಗವಹಿಸಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.