ರಬಾಕಾವಿಬನಹಟ್ಟಿ

ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಸ್ಮರಿಸಿ : ದಾನೇಶ್ವರ ಶ್ರೀಗಳು

ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಸ್ಮರಿಸಿ : ದಾನೇಶ್ವರ ಶ್ರೀಗಳು

ರಬಕವಿ-ಬನಹಟ್ಟಿ 15: ಕೊರೊನಾ ಆತಂಕಕ್ಕೆ ಒಳಪಟ್ಟ ಬಡವರಿಗೆ ಹಾಗೂ ಕಷ್ಟದಲ್ಲಿರುವರಿಗೆ ಸಹಾಯ ಸಹಕಾರ ನೀಡಿ ಪುಣ್ಯ ಪಡೆದುಕೊಳ್ಳಿರಿ, ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ. ದೇವರು ಶ್ರೀಮಂತಿಕೆ ಕೊಟ್ಟ ಮೇಲೆ ದಾನ ಧರ್ಮ ಮಾಡಬೇಕು. ಕಷ್ಟ ಕಾಲದಲ್ಲಿ ಸಹಾಯ ಮಾಡಿದವರನ್ನು ಮರೆಯದೆ ಸದಾ ಸ್ಮರಿಸಬೇಕೆಂದು ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. 

ಅವರು ಬಂಡಿಗಣಿ   ಬಸವ ಗೋಪಾಲ ಮಠದಲ್ಲಿ ಸೋಮವಾರದಂದು ಯಲ್ಲಮ್ಮ ದೇವಿ, ಜೋಗುಳಭಾವಿ ಸತ್ತೇಮ್ಮ, ಜಮದಗ್ನಿ, ಪರಸರಾಮ ದೇವರ ಸ್ಥಾಪನೆ, ವಿಶೇಷ ಪೂಜೆ, ಸತ್ಯನಾರಾಯಣ, ವರದ ಶಂಕರ ಪೂಜೆಯನ್ನು ನೆರವೇರಿಸಿ ಮಾತನಾಡಿದರು. 

ಸತ್ಯ ನೀತಿ ಧರ್ಮ ಪಾಲಿಸಿ ಕರ್ಮಕ್ಕೆ ಸಹಾಯವಾಗದೆ ಧರ್ಮಕ್ಕೆ ಸಹಾಯ ಸಹಕಾರ ನೀಡಿದರೆ ಕಷ್ಟ,ಆಪತ್ತುಗಳು ಬಯಲಾಗುತ್ತವೆ. ಸತ್ಯದ ಕಾಯಕ ಮಾಡಿ ಗಳಿಸಿದ ಸಂಪತ್ತು ಕೊನೆತನಕ ಅನ್ಯಾಯದ ಮಾರ್ಗದಲ್ಲಿ ಗಳಿಸಿದ್ದು ಕ್ಷಣಿಕ ಹಾಗೂ ಕಷ್ಟಕರವಾದದ್ದು. ಸಂತ ಮಹಾತ್ಮರ ಸಂಗದಲ್ಲಿದ್ದು ಅಧ್ಯಾತ್ಮದ ಕಡೆ ಒಲವು ಇರಬೇಕು. ಪಾಂಡವರಿಗೆ ಜಯ ಸಿಕ್ಕಂತೆ ಸತ್ಯಕ್ಕೆ ಜಯವಾಗುವದು.  ಒಬ್ಬರ ಮನಸ್ಸು ನೋಯಿಸುವದು ಮಹಾಪಾಪವೆಂದು ಹೇಳಿದರು.                                                

ವಿಜಯ ವೇದಾಂಗ ಶ್ರೀಗಳು ಮಾತನಾಡಿ  ಜಗತ್ತಿನಲ್ಲಿ ನಡೆಯುವ ಎಲ್ಲಾ  ಕಾರ್ಯಗಳ ಬಗ್ಗೆ ಅವತಾರಿಕರಿಗೆ ಮಾತ್ರ ತಿಳಿದಿರುತ್ತದೆ. ನೀತಿ ಭಕ್ತಿ, ಸಮಾಧಾನ, ಸನ್ಮಾರ್ಗ ಸಿಗುವದು ಬಂಡಿಗಣಿ ಮಠದಲ್ಲಿ ಮಾತ್ರ ಎಂದು ಹೇಳಿದರು.                           

ಶಾಂತಮ್ಮ ತಾಯಿ, ಕರೆಪ್ಪ ದಡ್ಡಿಮನಿ, ಅಶ್ವಿನಿ ಪಾಟೀಲ, ವೀಣಾ ಹೂಗಾರ ವಕೀಲರು, ಮಾರುತಿ ದೊಡಮನಿ, ಆರ್‌. ಬಿ. ಪಾಟೀಲ, ಶಿವಾನಂದ  ಹಿರೇಮಠ, ಸಿದ್ದಪ್ಪ ಸಂತರು ಸೇರಿದಂತೆ ಭಕ್ತರಿದ್ದು ಎಲ್ಲರೂ ಮಾಸ್ಕ್‌ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. 


ಸುದ್ದಿ ಓದಿ