ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಸತ್ಕಾರ
ಲೋಕದರ್ಶನ ವರದಿ
ಹುಕ್ಕೇರಿ 12: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಗೆ 19 ಜನ ಶಿಕ್ಷಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಎಸ್.ಆರ್. ಖಾನಾಪೂರೆ, ಬಿ.ಬಿ. ಅಂಗಡಿ, ಬಿ.ಎಂ. ನಾಯಿಕ, ಕೆ.ಕೆ. ಪಾಟೀಲ, ಎಸ್.ಎನ್. ಸುತ್ತಾರ, ಆರ್.ಆರ್. ತಳವಾರ, ಎಸ್.ಎ. ಮಾವಿನಕಟ್ಟಿ, ವಿ.ಪಿ. ಮಾಳಿ, ವಿ.ಕೆ. ಬಡಿಗೇರ, ಕೆ.ಬಿ. ವಾಘಾರಾಳಕರ, ಪಿ.ಜಿ. ಹೊನಗುಡಿ, ಎನ್.ಎಸ್. ದೇವರಮನಿ ಆಯ್ಕೆಯಾಗಿದ್ದಾರೆ. ಮಹಿಳಾ ಪ್ರತಿನಿಧಿಗಳಾಗಿ ಎಸ್.ವಿ. ಕುಂಬಾರ, ಎಸ್.ಜಿ. ನಾವಿ, ಜಿ.ಎಸ್. ಹಟ್ಟಿ, ಆರ್.ಎಸ್. ಭಂಡಾರಿ, ಯು.ಎನ್. ಕಂಬಳಿ, ಎಸ್.ಎಮ್. ಜಮ್ದಾರ ಆಯ್ಕೆಯಾಗಿದ್ದಾರೆ.
ಕೆ.ಕೆ. ಪಾಟೀಲ ಅಧ್ಯಕ್ಷರಾಗಿ, ಎಸ್.ಎನ್. ಸುತ್ತಾರ ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ಎ. ಮಾವಿನಕಟ್ಟಿ ಉಪಾಧ್ಯಕ್ಷರಾಗಿ, ವೈ.ಪಿ. ಮಾಳಿ ಖಜಾಂಚಿಯಾಗಿ, ಎಸ್.ಜಿ. ನಾವಿ ಮಹಿಳಾ ಕ್ಷೇತ್ರದ ಉಪಾಧ್ಯಕ್ಷರಾಗಿ, ಆರ್.ಆರ್. ತಳವಾರ ಸಂಘಟನಾ ಕಾರ್ಯದರ್ಶಿಯಾಗಿ, ಜಿ.ಎಸ್. ಹಟ್ಟಿ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ, ಕೆ.ವಿ. ವಾಘಾರಾಳಕರ ಸಹಕಾರ್ಯದರ್ಶಿಯಾಗಿ, ಎಸ್.ಎಮ್. ಜಮ್ದಾರ ಮಹಿಳಾ ಸಹಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಬಿ. ತೇರದಾಳ ತಿಳಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ಎಸ್.ಎಮ್. ಹುಲ್ಲೋಳಿ ಕಾರ್ಯನಿರ್ವಹಿಸಿದರು. ಜಿಲ್ಲಾ ಪದಾಧಿಕಾರಿಗಳಾದ ಎ.ಬಿ. ನಾಯಿಕ, ಎಸ್.ಎಸ್. ಹಿರೇಮಠ, ಎಮ್.ಎಸ್. ನಂದಿ, ಎಮ್.ಎನ್. ಮಗದುಮ್ಮ, ಆರ್.ಎಸ್. ಅಂಬರಿ, ಬಿ.ಡಿ. ನರಸನ್ನವರ, ಜಿ.ವಿ. ದಳವಾಯಿ, ಎಲ್.ಎಸ್. ನಾಶಿಪುಡಿ ಅವರು ಅವಿರೋಧ ಆಯ್ಕೆಗೆ ಶ್ರಮಿಸಿದ್ದಾರೆ.