ಹಿಂದು ಮುಖಂಡನ ಮೇಲೆ ಗುಂಡಿನ ದಾಳಿ ಪ್ರಕರಣ : 12 ಗಂಟೆಯಲ್ಲಿ ಭೇಧಿಸಿದ ಬೆಳಗಾವಿ ಪೊಲೀಸರು, ಮೂವರ ಬಂಧನ

ಹಿಂದು ಮುಖಂಡನ ಮೇಲೆ ಗುಂಡಿನ ದಾಳಿ ಪ್ರಕರಣ : 12 ಗಂಟೆಯಲ್ಲಿ ಭೇಧಿಸಿದ ಬೆಳಗಾವಿ ಪೊಲೀಸರು, ಮೂವರ ಬಂಧನ

ಬೆಳಗಾವಿ, ಜ, 8 : ನಗರದಲ್ಲಿ ಶನಿವಾರ ರಾತ್ರಿ ನಡೆದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ  ಕೋಕಿತ್ಕರ್ ಅವರ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 12 ಗಂಟೆಗಳಲ್ಲಿ ಮೂವರನ್ನು ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ತಿಳಿಸಿದರು.


    ನಗರದ ತಮ್ಮ ಕಚೇರಿಯಲ್ಲಿ ರವಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಿಂದು ಸಂಘಟನೆಯ ಮುಖಂಡ ರವಿ ಕೋಕಿತ್ಕರ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಬೆಳಗಾವಿ ಪಾಟೀಲ ಮಾಳದ ಅಭಿಜಿತ್ ಸೋಮನಾಥ ಬಾತಕಾಂಡೆ (41), ಬಸ್ತವಾಡ ಸಂಭಾಜಿಗಲ್ಲಿಯ ರಾಹುಲ್ ನಿಂಗಾಣಿ ಕೊಡಚವಾಡ(32), ಬಸ್ತವಾಡ ಸಂಭಾಜಿ ಗಲ್ಲಿಯ ಜ್ಯೋತಿಬಾ ಗಂಗಾರಾಮ ಮುತಗೇಕರ(25) ಇವರೆಲ್ಲರು ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ ಎಂದು ವಿವರಿಸಿದರು.

   ಈ ಮೂವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ರವಿ ಕೋಕಿತ್ಕರ್ ಹಾಗೂ ಅಭಿಜಿತ್ ಬಾತಕಾಂಡೆ ಅವರ ನಡುವಿನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ ಹಾಗೂ ಗುಂಡಿನ ದಾಳಿಗೆ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ರವೀಂದ್ರ ಗಡಾದಿ ಹಾಗೂ ಸ್ನೇಹ ಪಿ.ವ್ಹಿ ಉಪಸ್ಥಿತರಿದ್ದರು.

ಸುದ್ದಿ ಓದಿ