ಮಾನಸಿಕ ಅಸ್ವಸ್ಥತೆ ಮೇಲೆ ಅತ್ಯಾಚಾರ : ಆರೋಪಿಗೆ 30 ವರ್ಷ ಕಾರಾವಾಸ ಶಿಕ್ಷೆ ಪ್ರಕಟ
ಸಂಕೇಶ್ವರ : ಅಪ್ರಾಪ್ತ ಮತ್ತು ಮಾನಸಿಕ ಅಸ್ವಸತ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಯ ವಿರುದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು 30 ವರ್ಷಗಳ ಕಾರಾವಾಸ ಹಾಗೂ 10 ಸಾವಿರ ದಂಡ ವಿಧಿಶಿ ತೀರ್ಪು ನೀಡಿ ಆದೇಶಿಸಿದೆ.
ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಕಳೆದ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಬಗ್ಗೆ ಸಂಕೇಶ್ವರ ಪೋಲಿಸ ಠಾಣಾ ಗುನ್ನಾ ನಂಬರ-153/2021 & ಎಸ್.ಪಿ.ಎಲ್.ನಂ.246/2021 ಕಲಂ-366(ಎ), 376(2)(ಜೆ), 376(2)(ಎಲ್) ಐಪಿಸಿ & ಕಲಂ-4, 5(ಕೆ), 6 ಪೊಕ್ಕೂ ಕಾಯ್ದೆ 2012 ನೇದರಅಡಿಯಲ್ಲಿ ಆರೋಪಿತನಾದ ಅಪ್ಪಾಸಾಹೇಬ ಬಾಳಗೌಡ ತೋಡಕರ @ಪಾಟೀಲ( 42) ಸಾ : ದರ್ಗಾ ಗಲ್ಲಿ ಸೊಲ್ಲಾಪೂರ ತಾ : ಹುಕ್ಕೇರಿ ಇವನಿಗೆ ಪೊಕ್ಸೊ ಪಕರಣದಲ್ಲಿ 30 ವರ್ಷ ಕಾರಾವಾಸ ಹಾಗೂ ರೂ.10,000 ದಂಡ ವಿಧಿಸಿ ಬೆಳಗಾವಿಯ ಹೇಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ವಿಶೇಷ ಶೀಘ್ರಗತಿ, ಪೋಕ್ಸೊ ನ್ಯಾಯಾಲಯ-1)ದ ನ್ಯಾಯಾಧೀಶರಾದ ಶ್ರೀಮತಿ ಸಿ. ಎಮ್. ಪುಷ್ಪಲತಾ, ಇವರು ಈ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಅವರು ವಾದ ಮಂಡಿಸಿದರು.
ಪಕರಣದ ವಿವರ : ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ 17 ವರ್ಷ ವಯಸ್ಸಿನ ಅಪ್ರಾಪ್ತ ಮತ್ತು ಮಾನಸಿಕ ಅಸ್ವಸತ್ತ ಬಾಲಕಿಗೆ ಆರೋಪಿತ ಅಪ್ಪಾಸಾಹೇಬ ಈತ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಮಾಡುವ ದುರುದ್ದೇಶದಿಂದಾ ದಿ. 01-09-2021 ರಂದು ತನ್ನ ದ್ವಿಚಕ್ರ ವಾಹನ ನಂಬರ ಕೆಎ-23-ಇಟಿ-8469ರ ಇದರ ಮೇಲೆ ಅಪಹರಣ ಮಾಡಿಕೊಂಡು ಸೊಲ್ಲಾಪೂರ ಗ್ರಾಮ ಹದ್ದಿಯ ಜಮೀನನಲ್ಲಿ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಜಬರಿ ಸಂಭೋಗ ಮಾಡಿದ ಅಪರಾಧದ ಮೇರೆಗೆ ಪ್ರಕರಣ ದಾಖಲಾಗಿತ್ತು.
ಸದರಿ ಈ ಪ್ರಕರಣದ ತನಿಖೆಯನ್ನು ಮಾಡಿ ಅಂದಿನ ಹುಕ್ಕೇರಿ ವೃತ್ತದ ಸಿಪಿಐ ರಮೇಶ ಬಿ ಛಾಯಾಗೋಳ ಅವರು ಆರೋಪಿತನ ಮೇಲೆ ಕಲಂ-366(ಎ), 376(2)(ಜೆ), 376(2)(ಎಲ್) ಐಪಿಸಿ & ಕಲಂ-4, 5(ಕೆ), 6 ಪೊಕ್ಸೊ ಕಾಯ್ದೆ 2012 ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣವನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಆರೋಪಿ ಅಪ್ಪಾಸಾಹೇಬ ಈತನ ವಿರುದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 30 ವರ್ಷಗಳ ಕಾರಾವಾಸ ಮತ್ತು 10 ಸಾವಿರ ದಂಡ ವಿಧಿಸಿ ಆದೇಶ ಮಾಡಿದೆ.