ಮಹಲಿಂಗಪುರ

ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ: ದುಷ್ಕರ್ಮಿಗೆ ಗಲ್ಲುಶಿಕ್ಷೆ ವಿಧಿಸಲು ಆಗ್ರಹ

ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ: ದುಷ್ಕರ್ಮಿಗೆ ಗಲ್ಲುಶಿಕ್ಷೆ ವಿಧಿಸಲು ಆಗ್ರಹ

ಮಹಾಲಿಂಗಪುರ 31:  ಅತ್ಯಾಚಾರಕ್ಕೆ ಒಳಪಟ್ಟು ಕಾಮುಕನಿಂದ ಹತಳಾದ ಕುಮಾರಿ ಶಶಿಕಲಾ ಉಪ್ಪಾರ ಈ ಸಹೋದರಿಯ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡುವುದಲ್ಲದೆ ಈ ಕೃತ್ಯವನ್ನು ಎಸಗಿರುವ ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರವನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ಸರ್ವ ಜನತೆ ತಹಸಿಲ್ದಾರ ಮುಧೋಳ ಇವರಿಗೆ ಮನವಿ ಸಲ್ಲಿಸಿದರು. 

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ನಿಗಮದ ನಿರ್ದೇಶಕ ಪಾಂಡಪ್ಪ ಸಿದ್ದಾಪುರ ಮಾತನಾಡಿ, ಅತ್ಯಾಚಾರಿ ಕಾಮುಕ ಕೊಲೆಗಡುಕನಿಗೆ ಗಲ್ಲು ಶಿಕ್ಷೆ ಆಗಲೇಬೇಕು ಅಲ್ಲಿವರೆಗೆ ರಾಜ್ಯಾದ್ಯಂತ ಹೋರಾಟವನ್ನು ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.  

ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಭರಮಸಾಗರ ಹೋಬಳಿ ಇಸಮುದ್ರ ಗ್ರಾಮದ ನಿವಾಸಿ ಶಶಿಕಲಾ ಮಹಾಂತೇಶ ಉಪ್ಪಾರ (14) ಅಪ್ರಾಪ್ತ ಬಾಲಕಿಯ ಮೇಲೆ ಜುಲೈ 23ರಂದು ಶುಕ್ರವಾರ ಮಧ್ಯಾಹ್ನ ಬಯಲು ಶೌಚಕ್ಕೆ ಹೋದ ಸಂದರ್ಭದಲ್ಲಿ ದುಷ್ಕರ್ಮಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಈಗಾಗಲೇ ಅಪರಾಧಿಯನ್ನು ಬಂಧಿಸಿರುವ ಚಿತ್ರದುರ್ಗ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳನ್ನು ಉಪ್ಪಾರ ಮಹಾಸಭಾ ಅಭಿನಂದಿಸುತ್ತದೆ ಎಂದರು. 

ಸೆರೆಸಿಕ್ಕ ಆರೋಪಿಗೆ ಸೂಕ್ತ ಕಾನೂನು ಕ್ರಮದ ಅಡಿಯಲ್ಲಿ ಮರಣದಂಡನೆ ಶಿಕ್ಷೆಯನ್ನು ನೀಡಬೇಕು ತಪ್ಪಿದಲ್ಲಿ ಇನ್ನಿತರ ಸಂಘ-ಸಂಸ್ಥೆಗಳೊಂದಿಗೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಸಂಘವು ಆಡಳಿತವನ್ನು ಎಚ್ಚರಿಸಿದೆ.  

ರಾಜ್ಯ ಮಹಿಳಾ ಅಧ್ಯಕ್ಷೆ ಕಮಲಾ ಜೇಡರ, ರಾಜ್ಯ ಉಪಾಧ್ಯಕ್ಷ ಗಣೇಶ ಪೂಜಾರಿ, ಜಿಲ್ಲಾ ಸಂಚಾಲಕ ರಾಘವೇಂದ್ರ ನೀಲನ್ನವರ, ತಾಲೂಕಾಧ್ಯಕ್ಷ ಅಶೋಕ ಸಿದ್ದಾಪುರ, ಮಹದೇವ ಜಗದಾಳ, ಘಟಕ ಅಧ್ಯಕ್ಷ ಸದಾನಂದ ಲೋಣಾರಿ ಗಲ್ಲು ಶಿಕ್ಷೆಗೆ ಒತ್ತಾಯಿಸಿ ಮಾತನಾಡಿದರು. 

ಈ ಸಂದರ್ಭದಲ್ಲಿ ದಿಗಂಬರ ಲೋಣಾರಿ , ರನ್ನ ಬೆಳಗಲಿ ಅಧ್ಯಕ್ಷ ಸಂಗಪ್ಪ ಹಿಪ್ಪಲಕರ, ಶ್ರೀಶೈಲ ಉಪ್ಪಾರ, ಬಸಪ್ಪ ಉಪ್ಪಾರ, ಸಂತೋಷ, ಕೃಷ್ಣ, ಮಂಜುನಾಥ ಲೋನಾರಿ, ಬಾಲಚಂದ್ರ ಘಮಾಣಿ, ಏಕನಾಥ ಉಪ್ಪಾರ, ವಿಜಯಲಕ್ಷ್ಮಿ ಸಾಲಿ, ಸುಮಿತ್ರ ಘಡೆ, ಮಹಾಂತೇಶ ಉಪ್ಪಾರ, ಲಕ್ಷ್ಮಣ ಹೊಸೂರ, ವೆಂಕಪ್ಪ ನಾಗರಾಳ, ಈಶ್ವರ ಹೆಗ್ಗಣ್ಣವರ, ಸಿದ್ದು ಹೆಗ್ಗಣ್ಣವರ, ವಿಠ್ಠಲ ಬಿರಾಜನವರ. ಮಂಜುನಾಥ ಉಪ್ಪಾರ, ರಾಜೇಶ್ವರಿ ಉಪ್ಪಾರ, ಶ್ರೀಶೈಲ ಸಿದ್ದಾಪುರ ಇನ್ನೂ ಮುಂತಾದವರಿದ್ದರು. 


ಸುದ್ದಿ ಓದಿ