ಮಹಲಿಂಗಪುರ

ಉಜ್ಜಯಿನಿ, ಶ್ರೀಶೈಲಂ, ಕಾಶಿ ಪೀಠಗಳ ಜಗದ್ಗುರುಗಳಿಂದ ಉದ್ಘಾಟನೆಗೊಂಡ ರನ್ನ ಬೆಳಗಲಿ ನವರಾತ್ರಿ ಉತ್ಸವ

ಉಜ್ಜಯಿನಿ, ಶ್ರೀಶೈಲಂ, ಕಾಶಿ ಪೀಠಗಳ ಜಗದ್ಗುರುಗಳಿಂದ ಉದ್ಘಾಟನೆಗೊಂಡ ರನ್ನ ಬೆಳಗಲಿ ನವರಾತ್ರಿ ಉತ್ಸವ

ಮಹಾಲಿಂಗಪುರ, 25 ; ಸಮೀಪದ ರನ್ನ ಬೆಳಗಲಿಯ ಕೋಡಿಹಳ್ಳ ತೋಟದ ಶ್ರೀ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರ, ಪುಣ್ಯಕೋಟಿ ಸಿದ್ಧಾಶ್ರಮದಲ್ಲಿ ಆದಿಶಕ್ತಿ ಭುವನೇಶ್ವರಿ ಬೆಟ್ಟದ ಭುವನೋತ್ಸವ,ಬೃಹತ್ ಕುಂಭಮೇಳ ಮತ್ತು ನವರಾತ್ರಿ ಉತ್ಸವವು ನಾಡಿನ ಪಂಚಪೀಠ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಿತು. 

ಉಜ್ಜಯಿನಿ ಪೀಠದ ಶ್ರೀಮದ್ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಮಾತನಾಡಿ,ರನ್ನ ಬೆಳಗಲಿ ರನ್ನನಿಂದ ಅಂದು ಹೆಸರಾಯಿತು, ಇಂದು ರಮೇಶ್ ಕುಮಾರ್ ಶಾಸ್ತ್ರಿಗಳಿಂದ ಧಾರ್ಮಿಕ ಕ್ಷೇತ್ರದಲ್ಲಿ ಹೆಸರಾಗುತ್ತಿದೆ. ಯಾವುದೇ ಪಲಾ ಫಲವನ್ನ ಬಯಸಿದೆ ನಿಸ್ವಾರ್ಥ ದಿಂದ ಸರ್ವರಿಗೂ ಒಳಿತ ಆಗುವಂತೆ ಮಾಡುವ ಪೂಜೆ ಪುನಸ್ಕಾರಗಳಿಂದ ಫಲ ಬೇಗ ದೊರೆಯುತ್ತದೆ ಎಂದರು. 

ಶ್ರೀಶೈಲಂ ಪೀಠದ ಶ್ರೀಗಳು ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಾಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಮಾತನಾಡಿ, ಘಟ ಸ್ಥಾಪನೆ ಎಂದರೆ ನಮ್ಮ ದೇಹದ ಒಳಗೆ ಮನಸ್ಸನ್ನು ಧರ್ಮದ ನಿಯಮಗಳಿಂದ ಹದು ಮಾಡಿ ಉತ್ತಮ ವಿಚಾರಗಳೆಂಬ ಬೀಜವನ್ನು ಬಿತ್ತಿ ದೇವಿಯ ಧ್ಯಾನ ಮಾಡುತ್ತಾ ಸ್ಥಾಪನೆಯ ಮಾಡುವುದೇ ಘಟಸ್ಥಾಪನೆ. ದೇವಿ ಪುರಾಣದ ಜೊತೆಗೆ ದೇಹದ ಒಳಗೆ ಅಡಗಿದ ಕುಂಡಲನೀಯ ಶಕ್ತಿಯನ್ನು ಅರಿಯುವುದೇ ನವರಾತ್ರಿ ಉತ್ಸವ ಎಂದು ತಿಳಿಸಿದರು.  

ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಜಂಗಮವಾಡಿ ಮಠ ವಾರಣಾಸಿ ಕಾಶಿ ಪೀರಂ ಪೂಜ್ಯರು ನಮ್ಮ ಭಾರತೀಯ ಸನಾತನ ಧರ್ಮವು ವಿಶ್ವ ವ್ಯಾಪಿ ಹಬ್ಬಿದೆ. ಸನಾತನ ಧರ್ಮಕ್ಕೆ ಅಂತ್ಯವಿಲ್ಲ. ಎಲ್ಲಾ ಧರ್ಮಗಳ ಉಗಮಕ್ಕೆ ಸನಾತನ ಧರ್ಮವೇ ಮೂಲವಾಗಿದೆ. ಯುವ ಸಮುದಾಯ ಸನಾತನ ಧರ್ಮದ ರಕ್ಷಕರಾಗಬೇಕು ಎಂದು ಯುವಕರಿಗೆ ಕರೆ ನೀಡಿದರು. 

ಜ್ಯೋತಿಷಿ ಆನಂದ ಗುರೂಜಿ ಮಾತನಾಡಿ,ಮನುಕುಲದ ಉದ್ಧಾರಕ್ಕೆ ಪ್ರತಿಯೊಬ್ಬರೂ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊ ಳ್ಳಬೇಕು. ಪೂಜೆ, ಪುನಸ್ಕಾರಗಳಲ್ಲಿ ಭಾಗಿ ಆಗುವುದರಿಂದ ಸಂಸ್ಕೃತಿ ಉಳಿಯುತ್ತದೆ' ಎಂದರು. 

ಸಿದ್ದುಗೌಡ ಪಾಟೀಲ ಅಧ್ಯಕ್ಷತೆ, ಕೇಂದ್ರದ ಜೋತಿಷ್ಯ ರತ್ನ ಡಾ. ರಮೇಶಕುಮಾರ ಶಾಸ್ತ್ರಿಗಳು ನೇತೃತ್ವವಹಿಸಿದ್ದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೂಪಾ ಹೊಸಟ್ಟಿ, ದಿಗೇವಾಡಿಯ ಕಾಡಯ್ಯ ಶಾಸ್ತ್ರೀ, ಅಮರೇಶ್ವರದ ಗಂಗಾಧರಯ್ಯ ಶಾಸ್ತ್ರೀ, ಲೋಟಗೇರಿಯ ಗುರುಮೂರ್ತಿ ದೇವರ ಕಣಕಾಲಮಠ, ಬೆಳಗಾವಿಯ ಚಂದ್ರಶೇಖರ ಶಾಸ್ತ್ರೀ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ,ಬುಡರಕಟ್ಟೆಯ ಶಿವಪಂಚಾಕ್ಷರಿ ಸ್ವಾಮೀಜಿ, ಗಡಹಿಂಗ್ಲಜನ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ,ಹುಕ್ಕೇರಿ ಅಭಿನವ ಮಂಜುನಾಥ ಮಹಾರಾಜರು, ರನ್ನ ಬೆಳಗಲಿ ಸಿದ್ದರಾಮ ಶಿವಯೋಗಿಗಳು, ಮಹಾಲಿಂಗಪುರದ ಶ್ರೀಶೈಲಸ್ವಾಮೀಜಿ, ರಂಗಾಪುರದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು, ಕೊಣ್ಣೂರಿನ ಡಾ. ವಿಶ್ವ ಪ್ರಭುದೇವ ಶಿವಾಚಾರ್ಯ ಮಹಾಸ್ವಾಮಿಗಳು, ನಿಡಸೋಸಿ ಡಾ. ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು,ರಮೇಶ ಕೆಸರಗೋಪ್ಪ, ಸಿದ್ದಪ್ಪ ಬಿದರಿ, ಪದ್ಮಶ್ರೀ ಪುರಸ್ಕೃತೆ ಮಾತಾಬಿ ಮಂಜಮ್ಮ ಜೋಗತಿ ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ಇದ್ದರು. 


ಸುದ್ದಿ ಓದಿ