ನೇಮಕಾತಿ ಪ್ರಕಟಣೆ ವಾಪಸ್ ಪಡೆಯುವಂತೆ ರಂಗನಗೌಡ ಪಾಟೀಲ ಆಗ್ರಹ
ಮಹಾಲಿಂಗಪುರ 26 : ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವಿಜಯಪುರ ಇವರು ಮಾ. 21ರಂದು ನೀಡಿರುವ ನೇಮಕಾತಿ ಪ್ರಕಟಣೆೆಯನ್ನು ವಾಪಸ್ ಪಡೆಯಬೇಕು ಎಂದು ವಿಮೂಲ ಮಾಜಿ ಅಧ್ಯಕ್ಷ ರಂಗನಗೌಡ ಪಾಟೀಲ ಹೇಳಿದರು.
ಸ್ಥಳೀಯ ರಾಣಿ ಚನ್ನಮ್ಮ ವೃತ್ತದಲ್ಲಿರುವ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜಯಪುರ-ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಜಮಖಂಡಿ ರಬಕವಿ-ಬನಹಟ್ಟಿ ಮುಧೋಳ ಬೀಳಗಿ,ಜಮಖಂಡಿ ವ್ಯಾಪ್ತಿಯಲ್ಲಿ ಬರುವ ಹಾಲು ಉತ್ಪಾದಕರ ಸಹಕಾರಿ ಸಂಘಗಳು ತಮ್ಮ ವಿನಂತಿಯಿಂದ ಕೇಳಿಕೊಳ್ಳೂವುದೇನೆಂದರೆ ಸದರಿ ಒಕ್ಕೂಟ 140 ಜನ ಸಿಬ್ಬಂದಿ ವರ್ಗದವರು ಇರುತ್ತಾರೆ, ಒಕ್ಕೂಟದಲ್ಲಿ ದಿನಕ್ಕೆ 1.40 ಲಕ್ಷ ಲೀಟರ ಹಾಲು ಶೇಖರಣೆಯಾಗುತ್ತದೆ ಅದರಲ್ಲಿ 1.20 ಲಕ್ಷ ಲೀಟರ ಹಾಲು ಸಗಟಿನ ಮುಖಾಂತರ ಮಾರಾಟವಾಗಿ ಬಾಕಿ 20 ಸಾವಿರ ಲೀ.ಮೊದರು, ಮಜ್ಜಿಗೆ,ಹಾಗೂ ಇತರೆ ಉತ್ಪನ್ನಗಳಿಗೆ ಹಾಲು ಸಾಕಾಗುವುದಿಲ್ಲ, ಏಕೆಂದರೆ ಒಕ್ಕೂಟದವರು ಹಾಲೂ ಖರೀದಿಗೆ ನೀಡುವ ಹಾಲಿನ ದರ 3.5 ರಿಂದ 8.5 ಕ್ಕೆ ರೂ 30 ನೀಡುತ್ತಾರೆ. ಆದರೆ ಅದಕ್ಕೆ ಪ್ರತಿಯಾಗಿ ಖಾಸಗಿ ಡೈರಿಯವರು 3.5 ರಿಂದ 8-5 ಕ್ಕೆ ರೂ 38 ರಿಂದ 40 ರೂ ನೀಡುತ್ತಿರುವುದರಿಂದ ಒಕ್ಕೂಟಕ್ಕೆ ಹಾಲಿನ ಶೇಖರಣೆ ಪ್ರಮಾಣ ಹೆಚ್ಚಿಗಾಗದೆ ಕಡಿಮೆಯಾಗುತ್ತಿದೆ. ಆದರೆ ಒಕ್ಕೂಟದಲ್ಲಿ 1.40 ಲಕ್ಷ ಲೀಟರ್ ಹಾಲೀನ ಶೇಖರಣೆ ಕಾರ್ಯ ಮಾಡಲು 140 ಜನ ಸಿಬ್ಬಂದಿ ಕಾರ್ಯನಿರ್ವಸುತ್ತಿದ್ದಾರೆ. ಬೇರೆ ಒಕ್ಕೂಟಗಳಲ್ಲಿ ನಮ್ಮ ಒಕ್ಕೂಟಕ್ಕಿಂತ ಕಡಿಮೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು. ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹಾಲು ಶೇಖರಣೆಯಾಗುತ್ತಿದ್ದು. ಇದರಿಂದ ಕಂಡುಬರುವುದೇನೆಂದರೆ ನಮ್ಮ ಒಕ್ಕೂಟದಲ್ಲಿ ಈಗಾಗಲೇ ಹೆಚ್ಚಿನ ಸಿಬ್ಬಂದಿವರ್ಗ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಅಲ್ಲದೆ ಅವಳಿ ಜಿಲ್ಲೆಯಲ್ಲಿ ಒಟ್ಟು 450 ಸಂಘಗಳಿವೆ ಅಂದಾಜು 30 ಸಾವೀರ ರೈತರು ಹಾಲು ಕೊಡುತ್ತಾರೆ. ಸಂಘಗಳಲ್ಲಿ 1000 ರಿಂದ 12000 ಸಿಬ್ಬಂದಿಗಳಿದ್ದಾರೆ, ಆದ್ದರಿಂದ ಈಗಾಗಲೇ ಹೆಚ್ಚಿಗಿರಿವ ಒಕ್ಕೂಟಗಳಲ್ಲಿ ಇನ್ನೂ ಹೆಚ್ಚಿನ ಸಿಬ್ಬಂದಿ ತೆಗೆದುಕೊಳ್ಳೂವುದರಿಂದ ಹಾನಿಯಾಗುವ ಸಂಬವವಿದೆ. ಕಾರಣ ಯಾವುದೇ ಕಾರಣಕ್ಕೂ ಒಕ್ಕೂಟದಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳಬಾರದು ಒಂದು ವೇಳೆ ಸಿಬ್ಬಂದಿ ನೇಮಕ ಮಾಡಿಕೊಂಡರೆ ಅದರಿಂದಾಗುವ ಹಾನಿಗೆ ಆಡಳಿತ ಮಂಡಳಿಯೇ ನೇರ ಹೋಣೆಯಾಗುತ್ತಿರಿ ಎಂದರು.
ನಂತರ ಮಾತನಾಡಿದ ವಿಮುಲ ಮಾಜಿ ಸದಸ್ಯ ಮಹಾದೇವ ಮಾರಾಪುರ ಒಕ್ಕೂಟದವರ ಪ್ರಕಟನೆಯಂತೆ ನೇಮಕಾತಿಯನ್ನು ಮಾಡಿಕೊಂಡಿದ್ದೆ ಆದರೆ ಅದು ಹಾಲು ಉತ್ಪಾದನೆ ಮಾಡುವ ರೈತರ ಹಾಗೂ ಸಿಬ್ಬಂದಿಗಳ ಮೇಲೆ ಪರಿಣಾಮವಾಗಿ ಒಂದು ಲೀಟರ ಹಾಲಿಗೆ 1 ರೂ ಹಾನಿ ಸಂಭವಿಸಿ ತಿಂಗಳಿಗೆ 25 ಲಕ್ಷ ರೂ ಹಾನಿಯಾಗುತ್ತದೆ. ಹಾಗೂ ಸದರಿ ಸಿಬ್ಬಂದಿ ನೇಮಕಾತಿಯ ಅವಶ್ಯಕತೆಕೂಡಾ ಒಕ್ಕೂಟಕ್ಕೆ ಇರುವುದಿಲ್ಲ ಕಾರಣ ಒಕ್ಕೂಟದ ಏಳ್ಗೆಗಾಗಿ ನೇಮಕಾತಿ ಪ್ರಕಟನೆಯನ್ನು ಹಿಂಪಡೆದುಕೊಂಡು ರೈತರು ಮತ್ತು ಹಾಲು ಉತ್ಪಾದಕರಿಗೆ ಆಗುವ ಹಾನಿಯನ್ನು ತಪ್ಪಸಬೇಕು ಎಂದರು.
ವಿಮುಲ ಮಾಜಿ ಅಧ್ಯಕ್ಷ ಪಿ.ಟಿ ಪಾಟೀಲ, ಸದಸ್ಯೆ ರೇಣುಕಾ ಶೇಷಗಿರಿ, ಶಿವಲಿಂಗಪ್ಪ ವಾಲಿ, ರಾಜು ಬೆಳ್ಳೂರ, ಸಂಗಮೇಶ ಪಟ್ಟೇದ, ಅನುಗೌಡ ಪಾಟೀಲ, ಕಿರಣ ಚೋಳಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.