27 ಕುರಿಗಳ ನಿಗೂಢ ಸಾವು : ರಾಮದುರ್ಗ ತಾಲ್ಲೂಕಿನ ಮಣಿಹಾಳ್ ಗ್ರಾಮದಲ್ಲಿ ಘಟನೆ
ಬೆಳಗಾವಿ : ಬಡ ವ್ಯಕ್ತಿಯ ಬಳಿ ಇದ್ದ 100ರಲ್ಲಿ 27 ಕುರಿಗಳು ಆಕಸ್ಮಿಕ ನಿಗೂಢ ವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮಣಿಹಾಳ್ ಗ್ರಾಮದಲ್ಲಿ ಇಂದು ನಡೆದಿದೆ.
ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಮಣಿಹಾಳ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿಠ್ಠಲ ಸನದಿ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಒಟ್ಟು 100 ಕುರಿಗಳಲ್ಲಿ 27 ಕುರಿಗಳು ಸಾವೊನ್ನಪ್ಪಿವೆ. ಈ ಕುರಿಗಳ ಸಾವಿಗೆ ಕಾರಣ ಎನು ಎಂಬುವದು ತಿಳಿದಿಲ್ಲ. ಪಶುಪಾಲನಾ ಇಲಾಖೆ ವರದಿ ಬಳಿಕ ಕುರಿಗಳ ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬರಲಿದೆ.