"ಮಹಾ ಮಳೆ"ಗೆ ತತ್ತರಿಸಿದ ಬೆಳಗಾವಿ ಜಿಲ್ಲೆ: ಮತ್ತೆ ಪ್ರವಾಹ ಭೀತಿಯಲ್ಲಿ ಗಡಿಭಾಗದ ಜನ

"ಮಹಾ ಮಳೆ"ಗೆ ತತ್ತರಿಸಿದ ಬೆಳಗಾವಿ ಜಿಲ್ಲೆ: ಮತ್ತೆ ಪ್ರವಾಹ ಭೀತಿಯಲ್ಲಿ ಗಡಿಭಾಗದ ಜನ

ಬೆಳಗಾವಿ, ಆಗಷ್ಟ್ 16 : ನೆರೆಯ ಮಹಾರಾಷ್ಟ್ರ ಸೇರಿದಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಎಲ್ಲ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವದರಿಂದ ಜಿಲ್ಲೆಯ ನದಿಗಳಿಗೆ ಮಹಾರಾಷ್ಟ್ರದ  ಜಲಾಶಯಗಳಿಂದ ನೀರು ಹರಿಬಿಟ್ಟಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗುವ  ಭೀತಿ ಎದುರಾಗಿದೆ.

ಮಹಾ ಮಳೆಯಿಂದ ಘಟಪ್ರಭಾ ನದಿಗೆ ಒಳ ಹರಿವು ಹೆಚ್ಚಾಗಿರುವ ಹಿನ್ನಲೆಯಲ್ಲಿ ಹಿಡ್ಕಲ್ ಜಲಾಶಯದಿಂದ (ಡ್ಯಾಂ) 49.5 ಟಿಎಮ್‍ಸಿ ಭರ್ತಿ ಭರ್ತಿಯಾಗಿದ್ದು, ಒಳಹರಿವು 35 ಸಾವಿರ ಕ್ಯೂಸೆಕ್ಸ ದಾಟಿದೆ. ಇದರಿಂದ ಹಿಡಕಲ್ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ. ಅದರಂತೆ ಮಹಾರಾಷ್ಟ್ರದ ಸಾತಾರಾ, ಕೊಲ್ಹಾಪುರ ಸಾಂಗ್ಲಿ ಸುತ್ತಮುತ್ತಲೂ ಧಾರಾಕಾರ ಮಳೆ ಮುಂದುವರೆದಿದ್ದು, ಕೊಯ್ನಾ ಡ್ಯಾಮಿಗೆ ಹರಿದು ಬರುವ ನೀರಿನ ಪ್ರಮಾಣ ಪ್ರತಿ ಗಂಟೆಗೂ ಏರುಕೆಯಾತ್ತಿದೆ. ರವಿವಾರ ಸಂಜೆ 4 ಗಂಟೆಗೆ ತಾಸಿಗೆ 47219 ಕ್ಯೂಸೆಕ್ಸ ಇದ್ದದ್ದು, 5 ಗಂಟೆಗೆ 83877 ಕ್ಯೂಸೆಕ್ಸ ತಲುಪಿದೆ. 

105 ಟಿಎಮ್‍ಸಿ ಸಾಮಥ್ರ್ಯದ ಕೋಯ್ನಾ ಶಲಾಶಯದಲ್ಲಿ 91.21 ಟಿಎಮ್‍ಸಿ ಅಂದರೆ 86.66 ಪ್ರತಿಶತ ನೀರು ಭರ್ತಿಯಾಗಿದೆ. ಹೊರಹರಿವೂ ಸಂಜೆ 5ಕ್ಕೆ 54146 ಕ್ಯೂಸೆಕ್ಸ ಇದ್ದು ರಾತ್ರಿ ಮತ್ತೆ ಹೆಚ್ಚು ಸಂಭವಿದೆ. ಅದರಂತೆ ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿ ಹಾಗೂ ಮಹಾರಾಷ್ಟ್ರದ ಅರಣ್ಯ ಪ್ರದೇಶಗಳಲ್ಲಿ ಮಳೆಯು ಸತತವಾಗಿ ಬಿಳುತ್ತಿರುವದರಿಂದ ಮಲಪ್ರಭಾ ನದಿಗೆ ನಿರ್ಮಿಸಲಾಗಿರುವ ನವಿಲುತೀರ್ಥ ಜಲಾಶಯದಿಂದ 15 ಸಾವಿರ ಕ್ಯೂಸೆಕ್ಸ ನೀರನ್ನು ಬಿಡುಗಡೆ ಮಾಡಿರುವ ಹಿನ್ನಲೆ ಸವದತ್ತಿ, ರಾಮದುರ್ಗ, ನರಗುಂದ, ರೋಣ, ಬದಾಮಿ ತಾಲೂಕುಗಳ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. 

ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಮುಖ್ಯ ಅಭಿಯಂತರು ಇಂದು ರವಿವಾರ ಮಧ್ಯಾನ್ಹ 2 ಗಂಟೆಗೆ ಝೂಮ್ ಮೂಲಕ ವಿಡಿಯೊ ಕಾನ್ಫರೆನ್ಸ ನಡೆಸಿ ಸಂಭವನಿಯ ಪ್ರವಾಹ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು. ಕೃೃೃೃಷ್ಣಷ್ಷ ಮೇಲ್ದಂಡೆ ಯೋಜನೆಯ ಚೀಫ್ ಇಂಜನಿಯರ್ ಆರ್.ಪಿ.ಕುಲಕರ್ಣಿ, ನಾರಾಯಣಪುರ ಚೀಫ್ ಇಂಜನಿಯರ್ ರಂಗರಾಮ ಮತ್ತು ಮಹಾರಾಷ್ಟ್ರದ ಕೃಷ್ಷ್ಣಷ್ಷ ಕೊಳ್ಳದ ನಿಗಮದ ಚೀಫ್ ಇಂಜನಿಯರ್ ಗುಣಾಲೆ ಹಾಗೂ ಇತರ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.

ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಡ್ಯಾಮಿನ ಒಳಹರಿವು 24 ಸಾವಿರ ಕ್ಯೂಸೆಕ್ಸ ತಲುಪಿದೆ. ರವಿವಾರ ಸಂಜೆ 5 ಗಂಟೆಗೆ ಡ್ಯಾಮಿನಿಂದ 16 ಸಾವಿರ ಕ್ಯೂಸೆಕ್ಸ ಬಿಡಲಾಗುತ್ತಿದ್ದು ರಾತ್ರಿಗೆ ಇದು 17 ಸಾವಿರಕ್ಕೆ ತಲುಪಬಹುದು ಎನ್ನಲಾಗಿದೆ. ಸವದತ್ತಿ, ರಾಮದುರ್ಗ ತಾಲೂಕುಗಳ ನದಿ ತೀರದ ಊರುಗಳ ಜನರು ಹಗಲಿರುಳು ನದಿಗೆ ಹರಿದುಬರುತ್ತಿರುವ ನೀರಿನ ಮೇಲೆ ನಿಗಾ ಇರಿಸಿದ್ದಾರೆ. ರಾಮದುರ್ಗ, ಸುರೇಬಾನ ನಡುವಣ ಹಳೆಯ ಸೇತುವೆ, ಮುನವಳ್ಳಿಯ ಹಳೆಯ ಸೇತುವೆ ಮತ್ತು ಹೊಳೆ ಆಲೂರು ಬದಾಮಿ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.

ಅದರಂತೆ ಬೆಳಗಾವಿ ನಗರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿನ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವದು ವರದಿಯಾಗಿದೆ. ಅದರಂತೆ ಸತತವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ನಗರದ ಕೆಲವು ರಸ್ತೆಗಳೆಲ್ಲಾ ನದಿ ನೀರಿನಂತೆ ಗೋಚರಿಸುತ್ತಿವೆ. ಒಟ್ಟಿನಲ್ಲಿ ಸತತವಾಗಿ ಎಡೆ ಬಿಡದೆ ಧಾರಕಾರವಾಗಿ ಸುರಿಯುತ್ತಿರುವ ಮಳೆ ಮತ್ತೆ ಪ್ರವಾಹವನ್ನು ಉಂಟು ಮಾಡುವ ಸಾಧ್ಯತೆಯನ್ನು ಅಲ್ಲಗಳಿಯುವಂತಿಲ್ಲ. ಇದರಿಂದ ಜಿಲ್ಲೆಯ ಜನ ಮತ್ತೆ ಪ್ರವಾಹದ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ಸುದ್ದಿ ಓದಿ