ಚೀನಾದಲ್ಲಿ ಮಳೆ, ಪ್ರವಾಹ: ಮೃತರ ಸಂಖ್ಯೆ33 ಕ್ಕೆ ಏರಿಕೆ
ಬೀಜಿಂಗ್, ಜುಲೈ 22 ಚೀನಾದ ಹೆನಾನ್ ಪ್ರಾಂತ್ಯದದಲ್ಲಿ ಭಾರಿ ಮಳೆ- ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ.
ಇತರೆ 8 ಜನರು ಕಾಣೆಯಾಗಿದ್ದಾರೆ ತುರ್ತು ಪರಿಸ್ಥಿತಿಯ ಪ್ರಾದೇಶಿಕ ಇಲಾಖೆ ಗುರುವಾರ ತಿಳಿಸಿದೆ. ಈ ಹಿಂದೆ, ಸುಮಾರು 25 ಮೃತಪಟ್ಟು ಇತರೆ 7 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು.
ವಿಪತ್ತು ಪೀಡಿತ ಪ್ರದೇಶದಲ್ಲಿ 3 ದಶಲಕ್ಷಕ್ಕೂ ಹೆಚ್ಚು ಜನರು ಉಳಿದಿದ್ದಾರೆ ಎಂದು , ಸುಮಾರು 2 ಲಕ್ಷ 56,ಸಾವಿರ ಜನರು ಈವರೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.