ಕೇಂದ್ರದ ಹೊಸ ಕೃಷಿ ಕಾಯ್ದೆಗಳ ವಿರೋಧಿಸಿ ಟ್ರಾಕ್ಟರ್‌ ಓಡಿಸಿದ ರಾಹುಲ್‌ ಗಾಂಧಿ

ಕೇಂದ್ರದ  ಹೊಸ ಕೃಷಿ ಕಾಯ್ದೆಗಳ ವಿರೋಧಿಸಿ ಟ್ರಾಕ್ಟರ್‌  ಓಡಿಸಿದ ರಾಹುಲ್‌  ಗಾಂಧಿ

ನವದೆಹಲಿ,  ಜುಲೈ  26  ಕೇಂದ್ರ  ಸರ್ಕಾರ  ಜಾರಿಗೆ   ತಂದಿರುವ     ನೂತನ   ಕೃಷಿ  ಕಾಯ್ದೆಗಳ   ವಿರುದ್ಧ   ಟ್ರಾಕ್ಟರ್‌  ಓಡಿಸುವ   ಮೂಲಕ   ಕಾಂಗ್ರೆಸ್  ಸಂಸದ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದರು.     ಸೋಮವಾರ ಬೆಳಿಗ್ಗೆ   ರಾಹುಲ್‌  ಗಾಂಧಿ   ಟ್ರಾಕ್ಟರ್   ಓಡಿಸಿಕೊಂಡು  ಬರುವ   ಮೂಲಕ    ಸಂಸತ್‌  ಪ್ರವೇಶಿಸಿದರು.
ಮೂರು ಹೊಸ ಕೃಷಿ ಕಾಯ್ದೆಗಳ  ವಿರುದ್ಧವಾಗಿ   ಟ್ರ್ಯಾಕ್ಟರ್  ಓಡಿಸುವ ಮೂಲಕ   ರಾಹುಲ್     ಪ್ರತಿಭಟನೆ  ನಡೆಸುತ್ತಿರುವ  ರೈತರಿಗೆ  ತಮ್ಮ ಬೆಂಬಲ ವ್ಯಕ್ತಪಡಿಸಿದರು.   ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ-2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ-2020, ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ-2020  ಕಾಯ್ದೆಗಳನ್ನು   ಕಳೆದ  ವರ್ಷದ  ಸೆಪ್ಟಂಬರ್‌ ನಲ್ಲಿ    ಸಂಸತ್ತು  ಅನುಮೋದಿಸಿತ್ತು.
 
ಈ  ಕಾಯ್ದೆಗಳಿಂದ     ರೈತರಿಗೆ   ಕನಿಷ್ಟ  ಬೆಂಬಲ ಬೆಲೆ   ಸಿಗುವುದಿಲ್ಲ ಎಂದು   ರೈತ ಸಂಘಗಳು  ಆರೋಪಿಸಿವೆ.  ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು  ನಡೆಸುತ್ತಿರುವ  ಪ್ರತಿಭಟನೆಗೆ  ರಾಹುಲ್ ಗಾಂಧಿ ಮತ್ತೊಮ್ಮೆ ಬೆಂಬಲ ವ್ಯಕ್ತಪಡಿಸಿದ್ದಾರೆ.


ಸುದ್ದಿ ಓದಿ