ಆರ್ ಆರ್ ಪಿ ಎಫ್ ಸಂಸ್ಥಾಪನಾ ದಿನ: ಪ್ರಧಾನಿ ಅಭಿನಂದನೆ
ನವದೆಹಲಿ, ಜುಲೈ 27 ಸಿಆರ್‌ಪಿಎಫ್ 83 ನೇ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಸಂಸ್ಥಾಪನಾ ದಿನದ ಶುಭಾಶಯಗಳು. ಸಿಆರ್ಪಿಎಫ್ ತನ್ನ ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ಇದು ಭದ್ರತಾ ಪಡೆಯಲ್ಲಿ ಪ್ರಮುಖ ಪಾತ್ರ ಹೊಂದಿದೆ. ಮತ್ತು ರಾಷ್ಟ್ರೀಯ ಏಕತೆಗೆ ಕೊಡುಗೆ ನಿಜಕ್ಕೂ ಪ್ರಶಂಸನೀಯ.
1939 ರಲ್ಲಿ ಈ ದಿನ, ಸಿಆರ್ಪಿಎಫ್ ಕ್ರೌನ್ ಪ್ರತಿನಿಧಿಗಳ ಪೊಲೀಸ್ ಆಗಿ ಅಸ್ತಿತ್ವಕ್ಕೆ ಬಂದಿತು. ಇದು ಡಿಸೆಂಬರ್ 28, 1949 ರಂದು ಸಿಆರ್ಪಿಎಫ್ ಕಾಯ್ದೆ ಜಾರಿಯಾದ ನಂತರ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಆಗಿ ಹೊರಹೊಮ್ಮಿತು ಮತ್ತು 81 ವರ್ಷಗಳ ಸುದೀರ್ಘ ಇತಿಹಾಸ ಪೂರ್ಣಗೊಳಿಸಿದೆ. ದೇಶದ ಆಂತರಿಕ ಭದ್ರತೆ ಬಲಪಡಿಸುವುದು ಇದರ ಉದ್ದೇಶ, ಗುರಿಯಾಗಿದೆ.