ಆರ್ ಬಿ ಐ : ರೆಪೋ ದರ 25 ಮೂಲಾಂಕ ಕಡಿತ
ಮುಂಬೈ, ಅ 4: ಭಾರತೀಯ ರಿಸರ್ವ್ ಬ್ಯಾಂಕ್ ಆರ್ ಬಿ ಐ ನಿರೀಕ್ಷೆಯಂತೇ ರೆಪೋ ದರದಲ್ಲಿ 25 ಮೂಲಾಂಕಗಳನ್ನು ಕಡಿತ ಮಾಡಿದೆ; ತಕ್ಷಣದಿಂದ ಜಾರಿಯಾಗುವಂತೆ 5.4 ರಷ್ಟಿದ್ದ ರೆಪೋ ದರ 5.15 ರಷ್ಟಿರಲಿದೆ; ರಿವರ್ಸ್ ರೆಪೋದರ ಕೂಡ 4.9 ಕ್ಕೆ ಇಳಿಕೆ ಮಾಡಲಾಗಿದೆ. ಮುಂಬೈನಲ್ಲಿ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿರುವ ಆರ್ ಬಿ ಐ, ಹಿಂದಿನ ಸಮಿತಿ ಸಭೆಯಲ್ಲಿ ನಿರ್ಧರಿಸಿದ್ದ ಶೇ 6.9 ರ 2019- 20 ಜಿಡಿಪಿ ಮುನ್ನೋಟವನ್ನು ಶೇ 6.1 ಕ್ಕೆ ಇಳಿಸಿದೆ. 2020- 21 ಕ್ಕೆ ಜಿಡಿಪಿ ಮುನ್ನೋಟವನ್ನು ಶೇ 7.2 ಕ್ಕೆ ಅಂದಾಜಿಸಿದೆ. ಗೃಹ ಮತ್ತು ವಾಹನ ಸಾಲದ ಬಡ್ಡಿ ತಗ್ಗಿಸಲು ರೆಪೋ ದರ ಇಳಿಕೆ ಸಹಕಾರಿಯಾಗಲಿದೆ. ದೇಶದೊಳಗಿನ ವಾಣಿಜ್ಯ ಬ್ಯಾಂಕ್ ಗಳಿಂದ ಆರ್ ಬಿ ಐ ಸಾಲ ಪಡೆಯುವ ಬಡ್ಡಿ ದರವೇ ರಿವರ್ಸ್ ರೆಪೋ ದರ. ಆರ್ ಬಿ ಐ ಸತತ ಐದನೆ ಬಾರಿಗೆ ರೆಪೋ ದರ ಇಳಿಕೆ ಮಾಡಿದ್ದು ಒಟ್ಟು ಈ ದರ ಶೇ 1.35 ರಷ್ಟು ಇಳಿಕೆ ಕಂಡಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 