ಕುಕನೂರ್

ಮಕ್ಕಳಿಗೆ ಸ್ವರ್ಣಾ ಪ್ರಾಶನ ಹಾಕಿಸಿ : ವೀರಯ್ಯ ತೋಂಟದಾರ್ಯಮಠ

ಮಕ್ಕಳಿಗೆ ಸ್ವರ್ಣಾ ಪ್ರಾಶನ ಹಾಕಿಸಿ : ವೀರಯ್ಯ ತೋಂಟದಾರ್ಯಮಠ


ಲೋಕದರ್ಶನ ವರದಿ 

ಕುಕನೂರ 28: ಹುಟ್ಟಿದ ಮಗುವಿನಿಂದ ಐದು ವರ್ಷದವರೆಗೆ ಪ್ರತಿ ತಿಂಗಳು ಹಾಕಿದರೆ ಪರಿಣಾಮಕಾರಿ ಪ್ರಭಾವ ಬೀರುತ್ತದೆ. ಕನಿಷ್ಟ 21 ಬಾರಿಯಾದರೂ ಸ್ವರ್ಣ ಬಿಂದು ಪ್ರಾಶನ ಮಾಡಿಸಿದರೆ ಉತ್ತಮ. ಅಲ್ಲದೇ 5 ವರ್ಷದ ನಂತರ 16 ವರ್ಷದವರೆಗಿನ ಮಕ್ಕಳಿಗೂ ಪ್ರಾಶನ ಮಾಡಿಸಬಹುದು ಎಂದು ಕುಕನೂರಿನ ದಳಪತಿ ವೀರಯ್ಯ ತೋಂಟದಾರ್ಯಮಠ ಹೇಳಿದರು.  

    

 ಅವರು ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಕೊಪ್ಪಳ ಗವಿಮಠದ ಆಸ್ಪತ್ರೆ ವತಿಯಿಂದ ನಡೆದ ಸ್ವರ್ಣಾ ಪ್ರಾಶನ ಹಾಕಲಿಕ್ಕೆ ಚಾಲನೆ ನೀಡಿ ಮಾತನಾಡುತ್ತಾ  ಸ್ವರ್ಣಾ ಪ್ರಾಶನ ಮಾಡಿಸುವುದರಿಂದ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಬುದ್ಧಿಶಕ್ತಿ ವರ್ಧಿಸುತ್ತದೆ. ಪದೇ-ಪದೇ ಕಾಡುವ ರೋಗಗಳನ್ನು ತಡೆಗಟ್ಟಬಹುದು. ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಏಕಾಗ್ರತೆ ಉಂಟಾಗುತ್ತದೆ. ಬುದ್ಧಿಮಾಂದ್ಯತೆ, ವಾಕ್‌- ಶ್ರವಣಂ ದೋಷ ದೃಷ್ಟಿ ದೋಷಗಳನ್ನು ತಡೆಗಟ್ಟಬಹುದಲ್ಲದೇ ಚರ್ಮ ಕಾಂತಿಯುತವಾಗಿ ಇರುತ್ತದೆ ಎಂದರು. 

    ನಂತರ ಮಾತನಾಡಿದ ಗವಿಮಠದ ಆಸ್ಪತ್ರೆಯ ಡಾ ಸೂರ್ಯನಾರಯಣ ಆಯುರ್ವೇದ ವೈದ್ಯ ಪದ್ಧತಿ ಭಾರತದ ಪುರಾತನ ಪದ್ಧತಿಯಾಗಿದೆ. ಇದಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವೂ ಇದೆ. ದೇಶದ ಅನೇಕ ಕಾಡು-ಮೇಡು, ಬೆಟ್ಟ-ಗುಡ್ಡಗಳಲ್ಲಿ ಜೀವ ರಕ್ಷಕ ಗಿಡಮೂಲಿಕೆಗಳು ಈಗಲೂ ಇವೆ. ಇಂತಹ ವಿಸ್ತಾರ ಪರಿಧಿಯನ್ನು ಹೊಂದಿರುವ ಆಯುರ್ವೇದ ಪದ್ಧತಿಯ ಮೂಲಕ ಮಕ್ಕಳಿಗೆ ‘ಸ್ವರ್ಣ ಬಿಂದು ಪ್ರಾಶನ ಮಾಡಿಸುವುದು ಒಂದು ವಿಶಿಷ್ಟ ಪದ್ಧತಿಯಾಗಿದೆ ಆದ್ದರಿಂದ ಎಲ್ಲಾರು ತಮ್ಮ ಮಕ್ಕಳಿಗೆ ಸ್ವರ್ಣಾ ಪ್ರಾಶನ ಹಾಕಿಸಿಕೊಳ್ಳಬೇಕೆಂದು ಕರೆ ನೀಡಿದರು.  

     ಈ ಸಂದರ್ಭದಲ್ಲಿ ಪೂಜ್ಯ ಮಹಾದೇವ ದೇವರು, ಶಿವಲಿಂಗಯ್ಯ ಶಿರೂರಮಠ, ಗದಿಗೆಪ್ಪ ಪವಾಡಶೆಟ್ಟಿ, ನಿಂಗಪ್ಪ ಗೊರ್ಲೆಕೊಪ್ಪ, ಡಾ ಶಿವಶಾಂತ ಮತ್ತು ಇತರರು ಇದ್ದರು. 


ಸುದ್ದಿ ಓದಿ