ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಅವಕಾಶ ; ಉಪ ರಾಷ್ಟ್ರಪತಿ ನಾಯ್ಡು ಸಂತಸ

ಪ್ರಾದೇಶಿಕ ಭಾಷೆಗಳಲ್ಲಿ  ತಾಂತ್ರಿಕ ಶಿಕ್ಷಣಕ್ಕೆ  ಅವಕಾಶ ; ಉಪ ರಾಷ್ಟ್ರಪತಿ ನಾಯ್ಡು  ಸಂತಸ

ನವದೆಹಲಿ,  ಜುಲೈ ೧೭  ನೂತನ ಶೈಕ್ಷಣಿಕ ವರ್ಷದಿಂದ ೮ ರಾಜ್ಯಗಳ ೧೪ ಇಂಜನಿಯರಿಂಗ್ ಕಾಲೇಜುಗಳ ಆಯ್ದ ಶಾಖೆಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಕೋರ್ಸುಗಳನ್ನು ನಡೆಸುವ ನಿರ್ಧಾರವನ್ನು ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಅವರು ಸ್ವಾಗತಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ಎಐಸಿಟಿಇ,  ಬಿ ಟೆಕ್ ಪ್ರೋಗ್ರಾಂ ಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅಂದರೆ ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಗುಜರಾತಿ, ಮಲಯಾಳಂ, ಬೆಂಗಾಲಿ, ಅಸ್ಸಾಮಿ, ಪಂಜಾಬಿ ಹಾಗೂ  ಒಡಿಯಾಗಳಲ್ಲಿ ನೀಡಲು ಸಮ್ಮತಿಸಿರುವುದರಕ್ಕೆ ಉಪ ರಾಷ್ಟ್ರಪತಿಯವರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಹೆಚ್ಚಿನ ಇಂಜನಿಯರಿಂಗ್ ಕಾಲೇಜುಗಳು ಹಾಗು ಇತರ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಪ್ರಾದೇಶಿಕ ಭಾಷೆಯಲ್ಲಿ ಕೋರ್ಸ್‌ಗಳನ್ನು ನಡೆಸುವ ಬಗ್ಗೆ ಉಪರಾಷ್ಟ್ರಪತಿ ನಾಯ್ಡು  ಆಶಯ ವ್ಯಕ್ತಪಡಿಸಿದ್ದಾರೆ.

ಸುದ್ದಿ ಓದಿ