ಶಿಗ್ಗಾವ್

ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿ: ಶಾಸಕ ಪಠಾಣ

ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿ: ಶಾಸಕ ಪಠಾಣ


  ಶಿಗ್ಗಾವಿ  21: ಕ್ಷೇತ್ರದ ಜನರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ ಅಲ್ಲದೇ ಶಾಸಕನಾದವನು ರಾಜನಲ್ಲ ಜನರ ಸೇವಕ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.    ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮುಖ್ಯಮಂತ್ರಿ ವಿಶೇಷ  ಅನುಧಾನದಡಿಯಲ್ಲಿ ಚಿಕ್ಕಮಣಕಟ್ಟಿ 40 ಲಕ್ಷ,ಹಿರೆಮಣಕಟ್ಟಿ 140 ಲಕ್ಷ,ಕಡಹಳ್ಳಿ 30 ಲಕ್ಷ,ತಿಮ್ಮಾಪೂರ 167 ಲಕ್ಷ,ನೀರಲಗಿ 35 ಲಕ್ಷ ಮತ್ತು ಮುತ್ತಳ್ಳಿ 120 ಲಕ್ಷ ಒಟ್ಟು 5 ಕೋಟಿ 32 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮತ್ತು ಕಡಹಳ್ಳಿ 26, ತಿಮ್ಮಾಫೂರ 24, ನೀರಲಗಿ ಗ್ರಾಮದಲ್ಲಿ 34 ಒಟ್ಟು 84 ಫಲಾನುಭವಿಗಳಿಗೆ ಕಂದಾಯ ಗ್ರಾಮ ಹಕ್ಕುಪತ್ರ ವಿತರಿಸಿ  ಮಾತನಾಡಿದ ಅವರು 12 ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ನುಡಿದ ಹಾಗೆ ಕಾಯಕವೇ ಕೈಲಾಸ ತತ್ವದಂತೆ ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಕೈಲಾಸವನ್ನು ಕಾಣಬೇಕಾಗಿದೆ  ಎಂದರು.  ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಎಸ್‌.ಎಫ್‌.ಮಣಕಟ್ಟಿ, ಮಹಿಳಾ ಜಿಲ್ಲಾದ್ಯಕ್ಷೆ ವಸಂತಾ ಬಾಗೂರ, ಅಣ್ಣಪ್ಪ ಲಮಾಣಿ ಸೇರಿದಂತೆ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ