ಮಹಲಿಂಗಪುರ

ರೈತರಿಗೆ ಸಹಕಾರ, ಸವಲತ್ತು ನೀಡಿ : ರಾಮನಗೌಡ ಪಾಟೀಲ

ರೈತರಿಗೆ ಸಹಕಾರ, ಸವಲತ್ತು ನೀಡಿ : ರಾಮನಗೌಡ ಪಾಟೀಲ

ಮಹಾಲಿಂಗಪುರ  22: ರೈತರಿಂದಲೇ ಇತ್ತೀಚೆಗೆ ಕಾರ್ಖಾನೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಬಹು ಪ್ರಮಾಣದಲ್ಲಿ ರೈತ ಕಬ್ಬು ಬೆಳೆಯನ್ನು ಕಾರ್ಖಾನೆಗೆ ಸಾಗಿಸುತ್ತಿದ್ದಾನೆ. ರೈತನಿಗೆ ಅನುಕೂಲದ ಹಿತ ದೃಷ್ಟಿಯಿಂದ ಹೆಚ್ಚಿನ ಬೆಲೆಯ ಜೊತೆಗೆ ಸಹಾಯ,ಸಹಕಾರ ಮತ್ತು ಸವಲತ್ತು ನೀಡಬೇಕು ಎಂದು ಸಮೀರವಾಡಿ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಾಮನಗೌಡ ಬಿ ಪಾಟೀಲ ಹೇಳಿದರು. 

ಸಮೀಪದ ಸಮೀರವಾಡಿಯ ಕಬ್ಬು ಬೆಳೆಗಾರ ಸಂಘದ ಸಭಾಭವನದಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಸಂಘದ ಕಾರ್ಯದರ್ಶಿ ರಂಗನಗೌಡ ಪಾಟೀಲ ಪ್ರಸ್ತಾವಿಕ ಮಾತನಾಡಿ, 2024-25ರ ವಾರ್ಷಿಕ ಲೆಕ್ಕ,ಪತ್ರದ ವರದಿ ನೀಡಿದರು. 

ರೈತ ಮುಖಂಡರಾದ ರಾಮಗೌಡ ಪಾಟೀಲ, ಸುರೇಶ ಹಾದಿಮನಿ, ಮಲ್ಲಿಕಾರ್ಜುನ ಖಾನಗೌಡ ಮಾತನಾಡಿ, ಇತ್ತೀಚೆಗೆ ರೈತ ಬಹಳ ಸಮಸ್ಯೆಗಳಿಂದ ಜೀವನ ನಡೆಸುತ್ತಿದ್ದಾನೆ. ಕಡಿಮೆ ಬೆಲೆ, ತೂಕದಲ್ಲಿ ವ್ಯತ್ಯಾಸ, ಕಡಿಮೆ ಭೂಮಿಲಾಭ ಹೀಗೆ ಹಲವಾರು ಸಮಸ್ಯೆಗಳು ಇದ್ದರೂ ಕೂಡ ದೇಶಕ್ಕೆ ಅನ್ನವನ್ನು ನೀಡುವ ಏಕೈಕ ಜೀವಿ ರೈತನಾಗಿದ್ದಾನೆ. ಆದ್ದರಿಂದ ಉತ್ತಮ ರೀತಿಯಲ್ಲಿ ಬೆಲೆ ರೈತನಿಗೆ ಸಿಗಬೇಕು ಎಂದರು.  

ಈ ಸಂದರ್ಭದಲ್ಲಿ ಎಲ್ ಟಿ ಹುಚ್ಚರಡ್ಡಿ, ಬಿ ಜಿ ಹೊಸೂರ, ಈರಣ್ಣ ಕನಕರಡ್ಡಿ, ಎಸ್ ವೈ ಕಂಬಳಿ, ಎಸ್ ಎಸ್ ಪಾಟೀಲ, ಸುರೇಶಗೌಡ ಪಾಟೀಲ, ಟಿ ಆರ್ ಕೋರಿ, ಆರ್ ಟಿ ಬುದ್ನಿ, ಸಿ ಪಿ ಮುತ್ತಪ್ಪಗೋಳ, ರವಿ ಉಳ್ಳಾಗಡ್ಡಿ, ಗೋಪಾಲ ನಾಯಕ, ಈರ​‍್ಪ ಭಂಗಿ, ಶಿವಬಸು ಜುಂಜರವಾಡ ,ಮುತ್ತಪ್ಪ ಹುಲ್ಯಾಳ, ಬಿ ಬಿ ಕೆಂಗಾಲಿ ಸೇರಿದಂತೆ ಅನೇಕ ರೈತ ಮುಖಂಡರು ಮತ್ತು ರೈತರು ಉಪಸ್ಥಿತರಿದ್ದರು 


ಸುದ್ದಿ ಓದಿ