ಜಿಲ್ಲೆಯಲ್ಲಿಯೇ ್ರ್ರಥಮ ಅಶೋಕ ಲಾಂಛನವಾಗಿದ್ದು ಹೆಮ್ಮೆ: ಎಂ.ಬಿ.ಪಾಟೀಲ
Proud to be the first Ashoka Emblem in the district: M.B. Patil
ಸಿಂದಗಿ 29: 77ನೇ ಗಣರಾಜ್ಯೋತ್ಸವದ ದಿನ ಅಶೋಕ ಲಾಂಛನ ಸ್ತಂಭ ವೃತ್ತ ನಿರ್ಮಾಣ, ಗಾಂಧಿ ಪುತ್ಥಳಿ ಅನಾವರಣ, ನೂತನ ಹೈಟೆಕ್ ಅಂಬುಲೆನ್ಸ್ ಮತ್ತು ಡಯಾಲಿಸಿಸ್ ಕೇಂದ್ರ, ಪಿಡಿಯಾಟ್ರಿಕ್ ಐಸಿಯು ಘಟಕಗಳ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯ. ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಉನ್ನತಿಕರಣಕ್ಕೆ ಇನ್ನು ಹೆಚ್ಚಿನ ರೀತಿಯ ಸೌಲಭ್ಯಗಳನ್ನು ಒದಗಿಸುವ ದಿಸೆಯಲ್ಲಿ ಶಾಸಕ ಅಶೋಕ ಮನಗೂಳಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಹಕಾರ ನೀಡುತ್ತೇನೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಸಿಂದಗಿ ನಗರದ ನೂತನ ಗಾಂಧಿ ಪುತ್ಥಳಿ ಅನಾವರಣ, ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭ, ನಗರಸಭೆ ಕಾರ್ಯಾಲಯ ಉದ್ಘಾಟನೆ, ನೂತನ ಹೈಟೆಕ್ ಅಂಬುಲೆನ್ಸ್ ಮತ್ತು ಡಯಾಲಿಸಿಸ್ ಕೇಂದ್ರ, ಪಿಡಿಯಾಟ್ರಿಕ್ ಐಸಿಯು ಘಟಕಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವ ಮತ್ತು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ಪ್ರಯತ್ನದಿಂದ ನಗರದ 50ಸಾವಿರಕ್ಕೂ ಹೆಚ್ಚು ಜನತೆಯ ಕನಸಿನಂತೆ ಸಿಂದಗಿ ನಗರಸಭೆಯಾಗಿ ಪರಿವರ್ತನೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೇ ್ರ್ರಥಮ ಅಶೋಕ ಲಾಂಛನ ಇದಾಗಿದ್ದು ಹೆಮ್ಮೆಯ ಸಂಗತಿ. ಸರಕಾರ ಸಚಿವರಿಗೆ ಮತ್ತು ಇಲಾಖೆಗಳಿಗೆ ಭೇಟಿ ನೀಡಿ ಅನುದಾನ ತಂದು ಮತಕೇತ್ರವನ್ನು ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ. ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ಮತಕ್ಷೇತ್ರ ಮಾದರಿ ಮತಕ್ಷೇತ್ರ ಮಾಡುವಲ್ಲಿ ಶಾಸಕ ಅಶೋಕ ಮನಗೂಳಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿ ಮತಕ್ಷೇತ್ರದ ಅಭಿವೃದ್ಧಿ ನಾನು ಸದಾ ಸಿದ್ಧನಾಗಿದ್ದೇನೆ. ಸಿಂದಗಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ನಗರಸಭೆಯ ಕನಸನ್ನು ನನಸಾಗಿದ್ದು ಸಂತಸ ತಂದಿದೆ ಎಂದರು.
ಸಾನಿಧ್ಯವನ್ನು ಸೊನ್ನ ದಾಸೋಹ ವಿರಕ್ತಮಠದ ಡಾ.ಶಿವಾನಂದ ಮಹಾಸ್ವಾಮಿಗಳು, ಸಿಂದಗಿ ಬುದ್ಧ ವಿಹಾರದ ಶ್ರೀ ಸಂಘಪಾಲ ಬಂತೆಜೀ, ಹುಲಿಜಯಂತಿಯ ಮಾಳಿಂಗರಾಯ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಅಶೋಕ ವಾರದ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಕಾಂಬಳೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀಶೈಲ ಕೌಲಗಿ, ಸಾದಿಕ್ ಸುಂಬಡ, ರಾಜಶೇಖ ಕೂಚಬಾಳ ಸೇರಿದಂತೆ ಅನೇಕರು ಇದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 