ಮಹಾಲಿಂಗಪುರ ತಾಲೂಕಿಗಾಗಿ ಸುದೀರ್ಘ ಹೋರಾಟ, ನೀಡಿದ ಭರವಸೆಗಳು ಅರ್ಧಕ್ಕೆ
ಅಕ್ಟೋಬರ್ 8ರಂದು ಸಿಎಂ ಮನೆ ಮುಂದೆ ಧರಣಿ
ಮಹಾಲಿಂಗಪುರ 31: ನೂತನ ತಾಲೂಕಿಗಾಗಿ 1239 ದಿನಗಳಿಂದ ಹೋರಾಟ ನಡೆದಿದೆ,ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಆಶಾದಾಯಕ ಪ್ರತಿ ಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಅಕ್ಟೋಬರ್ 8 ನೇ ತಾರೀಖಿನಂದು ಸಿಎಂ ಸಿದ್ದರಾಮಯ್ಯ ಅವರ ಮನೆ ಮುಂದೆ ಧರಣಿ ನಡೆಸಲು ನಿರ್ಧರಿಸಲಾಯಿತು ಎಂದು ಹೋರಾಟ ಸಮಿತಿ ತಿಳಿಸಿದೆ.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ಮಹಾಲಿಂಗಪುರ ನೂತನ ತಾಲೂಕಿನ ಹೋರಾಟಕ್ಕೆ ಎಲ್ಲ ಮುಖಂಡರು ಮತ್ತು ಸಾರ್ವಜನಿಕರು ಕೈ ಜೋಡಿಸಬೇಕು ಆಗ ತಾಲೂಕು ಪಡೆಯುವ ದಾರಿ ಸುಗಮವಾಗುತ್ತದೆ. ಅಕ್ಟೋಬರ್ 8 ರಂದು ನಾಡ ದೊರೆಯ ಮನೆ ಮುಂದೆ ನೂತನ ತಾಲೂಕಿಗಾಗಿ ಧರಣಿ ನಡೆಯಲಿದ್ದು, ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.ಮುಖಂಡರು ನೀಡಿರುವ ಭರವಸೆಗಳು ಅರ್ಧಕ್ಕೆ ನಿಂತರೂ ನಮ್ಮ ಹೋರಾಟ ಅಚಲ ಎಂದರು.
ಇತ್ತೀಚೆಗೆ ನೀಲಕಂಠೇಶ್ವರ ದೇವಾಲಯದಲ್ಲಿ ಹೋರಾಟ ಸಮಿತಿ ಕರೆದ ಸಭೆಯಲ್ಲಿ ಪ್ರಮುಖರು ಪರಸ್ಪರ ಚರ್ಚೆ ನಡೆಸಿ ನಿರ್ಧಾರ ಕೈಗೊಂಡರು. ಮಹಾಲಿಂಗಪುರ ನೂತನ ತಾಲೂಕು ರಚನೆ ಕುರಿತಾಗಿ ಹೋರಾಟ ನಾಲ್ಕನೇ ವರ್ಷದಲ್ಲಿ ಮುಂದುವರಿದಿದೆ. ಇಷ್ಟು ಸುಧೀರ್ಘವಾದ ಹೋರಾಟ ಬಹುಶಃ ದೇಶದ ಇತಿಹಾಸದಲ್ಲಿಯೇ ಇಲ್ಲ ಎನ್ನಬಹುದು.
ಅಧಿಕಾರಿಗಳು ಕಳುಹಿಸಿದ ತಾಲೂಕು ರಚನಾ ವರದಿಯನ್ನು ಸಮಗ್ರವಾಗಿ ಸಿಎಂ ಅವರು ಮರು ಪರೀಶೀಲನೆ ನಡೆಸಲಿಕ್ಕೆ ಕಂದಾಯ ಇಲಾಖೆಗೆ ಸೂಚಿಸಬೇಕೆಂಬ ಒತ್ತಾಯವನ್ನು ತಾಲೂಕು ಹೋರಾಟಗಾರರು ಮಾಡಲಿದ್ದಾರೆ ಎಂದು ಹೋರಾಟ ಸಮಿತಿ ತಿಳಿಸಿದೆ.
ಹಂತ ಹಂತವಾಗಿ ನಡೆದಿರುವ ಈ ತಾಳ್ಮೆಯ ಹೋರಾಟ ಎಲ್ಲ ಮಿತಿಗಳನ್ನು ಮೀರಿ ನಡೆದಿದೆ.ಇತ್ತಿಚೆಗೆ ಮುಂದಿನ ಹಂತದ ಹೋರಾಟದ ಭಾಗವಾಗಿ ಸಾರ್ವಜನಿಕರಿಂದ ಪಟ್ಟಣ ಸಂಪೂರ್ಣ ಬಂದ್ ಮತ್ತು ಎತ್ತಿನ ಬಂಡಿ ಮೆರವಣಿಗೆ ಜೊತೆಗೆ ಬಾರುಕೋಲು ಚಳವಳಿ ನಡೆಯಿತು.
ಅಂದು ಜಿಲ್ಲಾಧಿಕಾರಿ ಸಂಗಪ್ಪ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿ ರಾಜ್ಯ ಸರ್ಕಾರಕ್ಕೆ ರವಾಣಿಸುತ್ತೇನೆ ಎಂದು ಹೋರಾಟ ನಿರತರಿಗೆ ತಿಳಿಸಿದ್ದನ್ನು ಸ್ಮರಿಸಬಹುದು. ಈ ಸಂದರ್ಭದಲ್ಲಿ ಎಸಿ ಶ್ವೇತಾ ಬೀಡಿಕರ, ತಹಶೀಲ್ದಾರ್ ಗಿರಿಶ್ ಸ್ವಾದಿ, ಜಿಲ್ಲಾ, ಡಿವೈಎಸ್ಪಿ ಜಮೀರ್ ರೋಷನ್ ಮತ್ತು ಸಿಪಿಆಯ್ ಸಂಜೀವ ಬಳಿಗಾರ್ ಇದ್ದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ಕೋಮಾರ ನೇತೃತ್ವದಲ್ಲಿ ಸಂಘದ ಸದಸ್ಯರು ತಾಲ್ಲೂಕು ಹೋರಾಟಕ್ಕೆ ಬೆಂಬಲ ವ್ಯಕ್ತ-ಪಡಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಅರ್ಜುನ ಹಲಗಿಗೌಡರ,ಮಹಮ್ಮದ್ ಹೂಲಿಕಟ್ಟಿ, ಗಂಗಾಧರ ಮೇಟಿ, ಜಯರಾಮಶೆಟ್ಟಿ, ವೀರೇಶ ಆಸಂಗಿ ಮಾತನಾಡಿದರು.
ಹೋರಾಟಗಾರರಾದ ನಿಂಗಪ್ಪ ಬಾಳಿಕಾಯಿ, ಮಹಾದೇವ ಮಾರಾಪುರ, ಮಲ್ಲಪ್ಪ ಸಿಂಗಾಡಿ, ದುಂಡಪ್ಪ ಜಾಧವ, ಚನ್ನಪ್ಪ ಪಟ್ಟಣಶೆಟ್ಟಿ, ಆನಂದ ಹಟ್ಟಿ, ಮಲ್ಲಪ್ಪ ಸಿಂಗಾಡಿ, ಬಸವರಾಜ ಹಿಟ್ಟಿನಮಠ, ಆನಂದ ಹಟ್ಟಿ,ಸುಭಾಷ ಶಿರಬೂರ, ಈರಣ್ಣ ಹಲಗತ್ತಿ, ಶ್ರೀಶೈಲ ಉಳ್ಳಾಗಡ್ಡಿ, ಸಿದ್ರಾಮ ಯರಗಟ್ಟಿ, ರಾಜು ತೇರದಾಳ, ಶಿವಲಿಂಗ ಟಿರಕಿ, ಚಂದ್ರಶೇಖರ ಹುಣಶ್ಯಾಳ, ಸಿದ್ದಪ್ಪ ಶಿರೋಳ, ಈಶ್ವರ ಮುರಗೋಡ, ಎಂ.ಆರ್.ತೇರದಾಳ, ಈರಣ್ಣ ಹಲಗತ್ತಿ, ಮಹಾಲಿಂಗಪ್ಪ ಅವರಾದಿ, ಶ್ರೀಶೈಲಪ್ಪ ಉಳ್ಳಾಗಡ್ಡಿ,ಮಾರುತಿ ಖರೋಶಿ, ಶ್ರೀಶೈಲ ಸತ್ತಿಗೇರಿ, ರಫೀಕ್ ಮಾಲದಾರ, ವೀರಭದ್ರ ಮುಗಳ್ಯಾಳ, ಶ್ರೀಶೈಲ ಚನ್ನಾಳ,ಡಿ.ಬಿ. ನಾಗನೂರ,ರಾಜೇಂದ್ರ ಮಿರ್ಜಿ, ಪರಶುರಾಮ ಕೊಣ್ಣೂರ, ಭೀಮಸಿ ಗೌಂಡಿ, ಹನಮಂತ ಪೂಜೇರಿ, ಸಿದಗಿರೆಪ್ಪ ಉಳ್ಳಾಗಡ್ಡಿ, ಕರೆಪ್ಪ ಮೇಟಿ, ಶ್ರೀಕಾಂತ ಗೂಳನ್ನವರ ಭಾಗವಹಿಸಿದ್ದರು.