ಮುಧೋಳ

ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಮುಧೋಳ:  1995ರ ನಂತರ ಆರಂಭವಾದ ಅನುದಾನರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಹಾಗೂ ಅನುದಾನಿತ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು ಶನಿವಾರ ಅನುದಾನ ರಹಿತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘ ಮತ್ತು ಅನುದಾನಿತ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಹಾಗೂ ಮುಖ್ಯೋಪಾಧ್ಯಾಯರ ಸಂಘ ಹಾಗೂ ಶಿಕ್ಷಕರು ಮತ್ತು ಆಡಳತ ಮಂಡಳಿ ಸದಸ್ಯರು ಸಂಯುಕ್ತವಾಗಿ ಕಪ್ಪು ಪಟ್ಟಿ ಕಟ್ಟಿಕೊಂಡು ಹಮ್ಮಿಕೊಂಡ ಪ್ರತಿಭಟನೆ ನಗರದ ಬಸವೇಶ್ವರ ವೃತ್ತದಿಂದ ತಹಸೀಲ್ದಾರ ಕಚೇರಿಯವರೆಗೆ ನಡೆದು ಕಸಬಾಜಂಬಗಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ಗವಿಮಠದ ನಿಜಗುಣದೇವರು ಶಿರೋಳ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ ನೇತೃತ್ವದಲ್ಲಿ  ತಹಸೀಲ್ದಾರ ಸಂಗಮೇಶ ಬಾಡಗಿ ಅವರಿಗೆ ಮನವಿ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿ ಕನರ್ಾಟಕ ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಮಠ ಮಾನ್ಯಗಳು  ಸೇರಿ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಸಕರ್ಾರ ಮಾಡಬೇಕಾದ ಕಾರ್ಯವನ್ನು ಯಾವೂದೇ ಫಲಾಪೇಕ್ಷವಿಲ್ಲದೆ ಮಾಡುತ್ತಾ ಬಂದಿವೆ.1986ರವೆರಗೆ ಸಕರ್ಾರದ ಸಹಭಾಗುತ್ವದಲ್ಲಿ ನಡೆದು ಬಂದಿತ್ತು ನಂತರ ಅದು ನಿಂತು ಹೋಗಿತ್ತು, ನಂತರ 2006ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸಕರ್ಾರ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶಿಕ್ಷಣ ಸಚಿವರಾಗಿದ್ದ ಬಸವರಾಜ ಹೊರಟ್ಟಿ ಅವರು 1986ರಿಂದ 1993ರವರೆಗೆ ಅನುಧಾನ ನೀಡದರು ನಂತರ 2008ರಲ್ಲಿ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಅವರು 1995ರವರೆಗೆ ಅನುದಾನ ನೀಡಿದರು.

        2008ರವರೆಗೆ 1995ರ ನಂತರ ಬಂದ ಯಾವೂದೇ ಕನ್ನಡ ಮಾಧ್ಯಮ ಶಾಲೆಗಳು ಅನುದಾನಕ್ಕೆ ಒಳಪಡಿಸಿದೆ ಕನ್ನಡ ಭಾಷೆಗೆ ಹಾಗೂ ಶಿಕ್ಪ್ಷಕರಿಗೆ ಅನ್ಯಾಯ ಮಾಡಿದೆ ಮಕ್ಕಳು ಸಕರ್ಾರ ಕೆಲ ಯೋಜನೆಗಳಿಂದ ವಂಚಿತರಾಗಿದ್ದಾರೆ ಕೂಡಲೇ ಈ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಅನುಧಾನಕ್ಕೆ ಒಳಪಡಿಸಬೇಕು ಹಾಗೂ ಎನ್ಪಿಎಸ್ ರದ್ದತಿ ಮಾಡಬೇಕು ಎಂದು ಹೇಳಿದರು.

   ಅನುದಾನ ರಹಿತ ಮುಖ್ಯೋಫಾದ್ಯಾಯರ ಸಂಘದ ಅಧ್ಯಕ್ಷ ಎಂ.ಎಸ್.ಬರಗಿ ಮಾತನಾಡಿ 1995ರ ನಂತರ ಪ್ರಾರಂಭವಾದ ಎಲ್ಲ ಶಾಲೆಗಳಿಗೆ ಅನುಧಾನ ನೀಡಿ ಅನುಧಾನಿತ ಶಿಕ್ಪ್ಷಕರಿಗೆ ಕಾಲ್ಪನಿಕ ವೇತನ ಬಡ್ತಿ ಜಾರಿ ಮಾಡಬೇಕು ಶಿಕ್ಷಕರ-ಮಕ್ಕಳ ಅನುಪಾತ 1;50 ಜಾರಿಯಾಗಬೇಕು ಹಾಗೂ ಜ್ಯೋತಿ ಸಚಿಜೀವಿನಿ ಜಾರಿಯಾಗಬೇಕು ಎಂದು ಹೇಳಿದರು.

   ಪ್ರತಿಭಟನೆಯಲ್ಲಿ ಕಸಬಾಜಂಬಗಿ ಹಿರೇಮಠದ  ರುದ್ರಮುನಿ ಶಿವಾಚಾರ್ಯರು, ಗವಿಮಠದ ನಿಜಗುಣದೇವರು ಶಿರೋಳ ರಾಮಾರೂಢ ಮಠದ ಶಂಕರಾರೂಢ ಶ್ರೀ ಅಧ್ಯಕ್ಷ ಎಂ.ಎಸ್.ಬರಗಿ, ಹನಮಂತ ಸೈಯಪ್ಪಗೋಳ, ಕಾರ್ಯದಶರ್ಿ ಎನ್.ಎಂ.ಜಂಗಾಲಿ,  ವೆಂಕಟೇಶ ಗುಡೆಪ್ಪನವರ. ಶೀವು ನೀಲಿ, ಎಸ್.ವಿ.ಹಿರೇಮಠ, ಮಹಾಂತೇಶ ಚಿಂಚಲಿ, ಎನ್.ವಿ.ಗಂಗರಡ್ಡಿ, ಲಕ್ಷ್ಮೀ ಪಾಟೀಲ, ಐ.ಬಿ.ಯಂಕಾಂಜಿ, ಅರುಣ ಬಿರಾದಾರ, ಮಲ್ಲಯ್ಯ ಮಠಪತಿ, ಎನ್.ವಿ.ಮಠಪತಿ, ಶಂಕರ ಹೂಗಾರ,ಅನೀಲ ಮಾಗಿ, ಬಸಯ್ಯ ಗಣಾಚಾರಿ, ಸೇರಿದಂತೆ ಇದ್ದರು.


ಸುದ್ದಿ ಓದಿ