ಪರಣ್ಣ ಮುನವಳ್ಳಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು,ಆ.3
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಗೆ ಸಚಿವ ಸ್ಥಾನ ನೀಡುವಂತೆ ವೀರಶೈವ ಲಿಂಗಾಯತರ ವೇದಿಕೆಯಿಂದ ನಿಕಟಪೂರ್ವ ಸಿಎಂ ಬಿಎಸ್‌ವೈ ಗೆ ಮನವಿ ಸಲ್ಲಿಸಿದರು.
ಕಾವೇರಿ ನಿವಾಸದಲ್ಲಿ ಯಡಿಯೂರಪ್ಪರ ನಿವಾಸದ ಮುಂದೆ ಮುನವಳ್ಳಿ ಬೆಂಬಲಿಗರು ಘೋಷಣೆ ಕೂಗಿ ಪ್ರತಿಭಟಿಸಿದರು.ಕೊಪ್ಪಳ ಜಿಲ್ಲೆಗೆ ಎರಡು ಸಲ ಅನ್ಯಾಯ ಆಗಿದೆ.ಆದರೆ ಈ ಸಲ ಅನ್ಯಾಯ ಆಗದಂತೆ ಕ್ರಮವಹಿಸುವಂತೆ ಮನವಿ ಮಾಡಿದರು.