ಮಹಿಳಾ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮ
ಮಹಾಲಿಂಗಪುರ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸ್ಥಳೀಯ ಹೇಮಾ ಅಗರವಾಲ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕ್ರೀಡೆಗಳಲ್ಲಿ ನಮ್ರತಾ ಅಗರವಾಲ, ಪವಿತ್ರ ಬಾವಿಕಟ್ಟಿ ಪ್ರಥಮ ಸ್ಥಾನ, ಮೀನಾಕ್ಷಿ ಕೌಜಲಗಿ, ಆರತಿ ಕೊಣ್ಣೂರ ದ್ವಿತೀಯ ಸ್ಥಾನ ಹಾಗೂ ಪ್ರೀತಿ ಅಗರವಾಲ ವಿಶೇಷ ಬಹುಮಾನ ಪಡೆದರು. ಲತಾ ಬಡಿಗೇರ, ವೇದಾ ಅಂಬಿ, ಶಿವಗೀತಾ ಮಠಪತಿ, ಭಾರತಿ ಸೂರಗೊಂಡ, ಸಂಗೀತ ಬಿಜಾಪುರ, ಗೀತಾ ಬಾಗೇವಾಡಿ, ಅರುಣಾ ಅಂಬಿ, ಜ್ಯೋತಿ ಅಂಬಿ ಇತರರಿದ್ದರು.