ಕುವೈತ್ ನೂತನ ಆಡಳಿತಗಾರನಾಗಿ ಪ್ರಿನ್ಸ್ ನವಾಫ್ ಅಲ್ ಸಬಾ ಪ್ರಮಾಣ ವಚನ
ಕುವೈತ್ ನಗರ, ಸೆಪ್ಟೆಂಬರ್ 30: ಪರ್ಷಿಯನ್ ಕೊಲ್ಲಿ ರಾಜಪ್ರಭುತ್ವದ ಹೊಸ ಆಡಳಿತಗಾರನಾಗಿ ದೇಶದ ಸಂಸತ್ತಿನ ಮುಂದೆ ಕುವೈತ್ ನ ರಾಜಪ್ರಭುತ್ವದ ರಾಜಕುಮಾರ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ಬುಧವಾರ ಸಾಂವಿಧಾನಿಕ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಸರ್ಕಾರಿ ವಾಹಿನಿ ಬುಧವಾರ ವರದಿ ಮಾಡಿದೆ.
ಕುವೈತ್ ನ 4ನೇ ದೊರೆ ಬಿನ್ ಅಹ್ಮದ್ ಅಲ್ ಸಬಾ ಸಾವಿನ ಬಳಿಕ ಮಂಗಳವಾರ ತಡವಾಗಿ ನಡೆದ ಸರ್ಕಾರದ ತುರ್ತು ಸಭೆಯ ನಂತರ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ಅವರ ನೇಮಕವನ್ನು ಘೋಷಿಸಲಾಯಿತು.
ಕುವೈತ್‌ನ ಶಾಸನದ ಪ್ರಕಾರ, ಸಿಂಹಾಸನದ ಉತ್ತರಾಧಿಕಾರಿ ಹಿಂದಿನವರ ಮರಣದ ನಂತರ ಸ್ವಯಂಚಾಲಿತವಾಗಿ ದೇಶದ ಹೊಸ ಆಡಳಿತಗಾರನಾಗುತ್ತಾನೆ. ಆದಾಗ್ಯೂ, ರಾಷ್ಟ್ರೀಯ ಅಸೆಂಬ್ಲಿಯ ಮುಂದೆ ಪ್ರಮಾಣವಚನ ಸ್ವೀಕರಿಸಿದ ನಂತರವೇ ಅವರ ಅಧಿಕಾರಗಳು ಜಾರಿಗೆ ಬರುತ್ತವೆ.
4ನೇ ಎಮಿರ್ ಸಬಾ ಅವರು 2006 ರಿಂದ ಕುವೈತ್ ಅನ್ನು ಆಳಿದ್ದರು. ಅವರು ಪ್ರಧಾನ ಮಂತ್ರಿಯಾಗಿ ಮತ್ತು ವಿದೇಶಾಂಗ ಸಚಿವರಾಗಿ ಹಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದರು. 91 ವರ್ಷದ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಜುಲೈ 18 ರಂದು ಕುವೈತ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡು ಗೆಡ್ಡೆಗಳನ್ನು ತೆಗೆದುಹಾಕಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.