ಸಂಸತ್ ಕಲಾಪಕ್ಕೆ ಅಡ್ಡಿ ವಿಪಕ್ಷಗಳ ವರ್ತನೆಗೆ ಪ್ರಧಾನಿ ಆಕ್ರೋಶ

ಸಂಸತ್ ಕಲಾಪಕ್ಕೆ ಅಡ್ಡಿ  ವಿಪಕ್ಷಗಳ ವರ್ತನೆಗೆ ಪ್ರಧಾನಿ ಆಕ್ರೋಶ

ನವದೆಹಲಿ, ಆಗಸ್ಟ್ 3 ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ನಿತಂತರ ಅಡ್ಡಿಪಡಿಸಿರುವುದಕ್ಕಾಗಿ ವಿರೋಧ ಪಕ್ಷಗಳ ವರ್ತನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಖಂಡಿಸಿದ್ದಾರೆ.

ಸದಸ್ಯರು ಸದನದ ಘನತೆ, ಗೌರವ  ಕಾಪಾಡುವಂತೆ ಪ್ರಧಾನಿ ಕಿವಿ ಮಾತು ಹೇಳಿದರು.  ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೀಯ ಪಕ್ಷದ ಸಭೆಯಲ್ಲಿ ವಿರೋಧಿ ಸದಸ್ಯರ  ನಡವಳಿಕೆ ಬಗ್ಗೆ ಪ್ರಧಾನಿ  ಅಸಮಾಧಾನ  ಹೊರ ಹಾಕಿದರು.
 
ವಿರೋಧಿ ಸದಸ್ಯರು ಇಂಧನ ಬೆಲೆ ಏರಿಕೆಯ ವಿರುದ್ಧ ಸೈಕಲ್ ಮೆರವಣಿಗೆ ನಡೆಸಿದರು. "ಸರ್ಕಾರವು ಯಾವುದೇ ಚರ್ಚೆಗೆ ಸಿದ್ಧವಾಗಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು, ಸದನದಲ್ಲಿ ಚರ್ಚೆಯ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಸಭೆಯ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದರು.
 
ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ  ಹಿರಿಯ ನಾಯಕರು ವಿರೋಧ ಪಕ್ಷದ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ ಪ್ರಧಾನಮಂತ್ರಿಯವರು ಘಟನೆಯ ಬಗ್ಗೆ ನೋವನ್ನು ವ್ಯಕ್ತಪಡಿಸಿ,  ಇದು ಸಂಸದರನ್ನು ಆಯ್ಕೆ ಮಾಡಿದ ಜನರಿಗೆ ಮಾಡುತ್ತಿರುವ  ಅವಮಾನ ಎಂದರು  ಎಂದು ಸಚಿವ ಜೋಶಿ ಹೇಳಿದರು  ಎಂದು ಅವರು ಹೇಳಿದರು.
ಸಂಸತ್ತಿನ ಮುಂಗಾರು ಅಧಿವೇಶನವು ಪೆಗಾಸಸ್ ಸ್ನೂಪಿಂಗ್ ವಿವಾದ ಮತ್ತು ಇತರ ವಿಷಯಗಳ ಪ್ರತಿಭಟನೆಗೆ ಸಾಕ್ಷಿಯಾಗಿದೆ.  ಸರ್ಕಾರದ ಮೂಲಗಳ ಪ್ರಕಾರ  ಕಲಾಪ  ಅಡಚಣೆಗಳಿಂದಾಗಿ ಬೊಕ್ಕಸಕ್ಕೆ ಈವರೆಗೆ  133 ಕೋಟಿರುಪಾಯಿ  ನಷ್ಟವಾಗಿದೆ ಎಂದು ಹೇಳಲಾಗಿದೆ.

ಸುದ್ದಿ ಓದಿ