ಪತ್ರಿಕಾ ದಿನಾಚರಣೆ- ವರದಿಗಾರರಿಗೆ ಸನ್ಮಾನ್
ಶಿಗ್ಗಾವಿ 04: ಪತ್ರಿಕಾ ದಿನಾಚರಣೆಯ ಅಂಗವಾಗಿ ತಾಲೂಕಿನ ವರದಿಗಾರರನ್ನು ಪಟ್ಟಣದ ವಾಲ್ಮೀಕಿ ಸಭಾ ಭವನದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ವರದಿಗಾರರಾದ ಪರುಶರಾಮ ಸತ್ಯಪ್ಪನವರ, ಬಿ.ಎಸ್.ಹಿರೇಮಠ, ಎಂ.ವ್ಹಿ.ಗಾಡದ, ಪರಮೇಶ ಲಮಾಣಿ, ಗೌಡಪ್ಪ ಬನ್ನೆ, ಕರ್ನಾಟಕ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, ರವಿ ಉಡುಪಿ, ಸದಾಶಿವಯ್ಯಸ್ವಾಮಿ ಹಿರೇಮಠ, ಬಸವರಾಜ ಹಡಪದ, ಮಂಜುನಾಥ ಕಮ್ಮಾರ, ಬಸವರಾಜ ಹೊಣ್ಣಣ್ಣವರ, ಸುರೇಶ ಯಲಿಗಾರ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.