ಪತ್ರಿಕಾ ದಿನಾಚರಣೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರಿಗೆ ಗೌರವ ಸನ್ಮಾನ
ಸಿರುಗುಪ್ಪ 27: ಪ್ರಚಲಿತ ಘಟನೆಗಳು ಸ್ಥಳೀಯ ಮಹತ್ವದ ಸುದ್ದಿಗಳಿಂದ ಹಿಡಿದು ದೇಶ ವಿದೇಶಗಳ ಪ್ರತಿಯೊಂದು ಮಾಹಿತಿಯನ್ನು ಪತ್ರಕರ್ತರು ಸಂಗ್ರಹಿಸಿ ವರದಿ ಸುದ್ದಿಗಳ ರೂಪದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ತಲುಪಿಸುವ ಕಾರ್ಯ ನಿರತರಾಗಿ ಕೈ ಗೊಳ್ಳುತ್ತಿದ್ದಾರೆ ಎಂದು ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಹೇಳಿದರು.
ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಬಳ್ಳಾರಿ ಜಿಲ್ಲಾ ತಾಲ್ಲೂಕು ಘಟಕ ಸಿರುಗುಪ್ಪ ಇವರಿಂದ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಭಾ ಭವನದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಗಳಂತೆ ಪತ್ರಿಕೋದ್ಯಮ ದೇಶದ ಮುಖ್ಯ ಅಂಗವಾಗಿದೆ ಎಂದು ತಹಸೀಲ್ದಾರ್ ನುಡಿದರು.
ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾ ಧರ್ಪನಾಯಕ ಉಪ ತಹಶೀಲ್ದಾರ್ ಎನ್ ಬಾಬು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ ಸಿದ್ದಯ್ಯ ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ಶಿಕ್ಷಕ ಪರಮೇಶಪ್ಪ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್ ಎಂ ನಾಗರಾಜ ಸ್ವಾಮಿ ಹಿರಿಯ ಪತ್ರಕರ್ತ ಎ.ಅಬ್ದುಲ್ ನಬಿ ಮಲ್ಲಿಕಾರ್ಜುನ ಭಾಸ್ಕರ್ ಪ್ರಸಾದ್ ಮಲ್ಲೇಶ್ವರ ಎ ಮೊಹಮ್ಮದ್ ಇಬ್ರಾಹಿಂ ಎ ಮೊಹಮ್ಮದ್ ರಫಿ ಎ ಮಹಮ್ಮದ್ ನೌಷಾದ್ ಅಲಿ ಮೊಹಮ್ಮದ್ ಖಲೀಲ್ ಇದ್ದರು.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹೆಚ್ಚು ಅಂಕಗಳಿಸಿದ ಮೊಹಮ್ಮದ್ ಹಾಜಿ ಹಿರಿಯ ಪತ್ರಕರ್ತ ಅಬ್ದುಲ್ ನಬಿ ಸೇರಿದಂತೆ ಸ್ವಾಮೀಜಿಗಳಿಗೆ ಗಣ್ಯರಿಗೆ ಅಧಿಕಾರಿಗಳಿಗೆ ಪತ್ರಕರ್ತರಿಗೆ ಕಲಾವಿದರಿಗೆ ಅಭಿನಂದಿಸಿ ಗೌರವಿಸಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಮಾಜಿ ಶಾಸಕ ಬಿ ಎಂ ನಾಗರಾಜ್ ಅವರು ಶೇ 99.68 ಬಳ್ಳಾರಿ ಜಿಲ್ಲೆ ಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಕ ಗಳಿಸಿದ ಮೊಹಮ್ಮದ್ ಹಾಜಿ ಗೆ ಗೌರವಿಸಿ ಸನ್ಮಾನಿಸಿದರು ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಎನ್ ಕರಿಬಸಪ್ಪ ಹಿರಿಯ ಗಣ್ಯರು ಉಪಸ್ಥಿತರಿದ್ದರು.