ಆಗಸ್ಟ್‌ 28ರಂದು ಆಯೋಧ್ಯೆಯ ರಾಮಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ

ಆಗಸ್ಟ್‌  28ರಂದು ಆಯೋಧ್ಯೆಯ ರಾಮಲಲ್ಲಾಗೆ   ರಾಷ್ಟ್ರಪತಿಗಳಿಂದ  ಪೂಜೆ

ಲಕ್ನೋ, ಜುಲೈ 20-  ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌   ಆಯೋಧ್ಯೆಯ ರಾಮಲಲ್ಲಾ ದೇಗುಲಕ್ಕೆ ಭೇಟಿ  ನೀಡಿ  ಪೂಜೆ  ಸಲ್ಲಿಸಲು   ಮುಂದಿನ ತಿಂಗಳು  ಉತ್ತರ ಪ್ರದೇಶಕ್ಕೆ ಭೇಟಿ  ನೀಡುವ ನಿರೀಕ್ಷೆಯಿದೆ. ಅಲ್ಲದೆ,   ಗೋರಕ್‌ ಪುರದಲ್ಲಿ ಆಯುಷ್‌  ವಿಶ್ವವಿದ್ಯಾಲಯಕ್ಕೆ   ಅಡಿಗಲ್ಲು ಇರಿಸಲಿರುವ  ಕಾರ್ಯಕ್ರಮಸಹ ನಿಗಧಿಯಾಗಿದೆ ಎಂದು ಅಧಿಕಾರಿ ಮೂಲಗಳು ಹೇಳಿವೆ.
         
ಪ್ರಾಥಮಿಕ ಯೋಜನೆಯಂತೆ   ರಾಷ್ಟ್ರಪತಿಗಳು  ಲಕ್ನೋದಿಂದ  ವಿಶೇಷ   ರೈಲು ಮೂಲಕ  ಆಯೋಧ್ಯೆ  ತಲುಪುವ  ನಿರೀಕ್ಷೆಯಿದೆ ಎಂದು  ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.   

ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ   ಅವರ    ಮೂರನೇ  ವಿಶೇಷ  ರೈಲು ಪ್ರಯಾಣ ಇದಾಗಲಿದ್ದು, ಈ ಮೊದಲು  ದೆಹಲಿಯಿಂದ  ಕಾನ್ಫುರ,  ಎರಡನೆಯದಾಗಿ ಕಾನ್ಪುರದಿಂದ  ಲಕ್ನೋಗೆ ವಿಶೇಷ ರೈಲಿನಲ್ಲಿ ಸಂಚರಿಸಿದ್ದರು.
         
ಆಗಸ್ಟ್‌ 27ರಿಂದ 29ರವರೆಗೆ   ರಾಷ್ಟ್ರಪತಿಗಳ  ಉತ್ತರ ಪ್ರದೇಶ   ಕಾರ್ಯಕ್ರಮ ನಿಗದಿಯಾಗಿದೆ.       

ಆಗಸ್ಟ್‌  27 ರಂದು   ರಾಷ್ಟ್ರಪತಿ  ವಿಶೇಷ  ವಿಮಾನದ  ಮೂಲಕ  ಅಮೌಸಿ  ವಿಮಾನ ನಿಲ್ದಾಣ ತಲುಪಲಿದ್ದು,  ಆಗಸ್ಟ್‌  28ರಂದು  ವಿಶೇಷ ವಿಮಾನದಲ್ಲಿ ಗೋರಕ್‌ ಪುರಕ್ಕೆ  ತೆರಳಿ    ಆಯುಷ್‌   ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ,    ಗುರು ಗೋರಕ್‌ ನಾಥ್‌  ವಿಶ್ವವಿದ್ಯಾಲಯ  ಆಸ್ಪತ್ರೆ  ನಿರ್ಮಾಣವನ್ನು ಉದ್ಘಾಟಿಸಲಿದ್ದಾರೆ.       
ನಂತರ  ಅದೇ ದಿನ   ಲಕ್ನೋ   ಹಿಂದಿರುಗಲಿದ್ದಾರೆ.  ಆಗಸ್ಟ್‌  29ರಂದು  ವಿಶೇಷ   ರೈಲಿನಲ್ಲಿ  ಆಯೋಧ್ಯೆಗೆ  ತೆರಳಿಲಿದ್ದು   ಅಲ್ಲಿ   ರಾಮಲಲ್ಲಾ ಹಾಗೂ ಹನುಮಗ್ರಾಹಿ ದೇಗಲಗಳಲ್ಲಿ   ವಿಶೇಷ  ಪೂಜೆ ಸಲ್ಲಿಸಿದನಂತರ  ಅಂದೇ  ಲಕ್ನೋಗೆ  ವಾಪಸ್ಸಾಗಲಿದ್ದು, ರಾಷ್ಟ್ರಪತಿ ಆಗಸ್ಟ್‌ 30ರಂದು  ದೆಹಲಿಗೆ ಹಿಂದಿರುಗಲಿದ್ದಾರೆ.

ಸುದ್ದಿ ಓದಿ