ಎನ್ಆರ್ಸಿ, ಎನ್ಪಿಆರ್, ಸಿಎಎ ಕಾಯ್ದೆ ರದ್ದತಿಗಾಗಿ ರಾಷ್ಟ್ರಪತಿಗೆ ಮನವಿ

ಎನ್ಆರ್ಸಿ, ಎನ್ಪಿಆರ್, ಸಿಎಎ ಕಾಯ್ದೆ ರದ್ದತಿಗಾಗಿ ರಾಷ್ಟ್ರಪತಿಗೆ ಮನವಿ

ರಾಯಬಾಗ 29:      ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶಾದ್ಯಾಂತ ಭಾರತ ಬಂದ್ಕರೆ ನೀಡಿದ್ದ ಬಹುಜನಕ್ರಾಂತಿ ಮೋರ್ಚಾಗೆ ಬೆಂಬಲ ವ್ಯಕ್ತಪಡಿಸಿ ಪಟ್ಟಣದಲ್ಲಿ ಮುಸ್ಲಿಂ, ದಲಿತ ಮತ್ತುಇತರೆ ವಿವಿಧ ಸಂಘಟನೆಗಳು ಬುಧವಾರನಡೆಸಿದ ರಾಯಬಾಗ ಪಟ್ಟಣ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು. 

ಪಟ್ಟಣದಲ್ಲಿ ಬುಧವಾರದಂದು ಬಂದ್ ಮಾಡುವುದಾಗಿ ಮುಸ್ಲಿಂ ಮತ್ತುದಲಿತ ಸಂಘನೆಗಳಿಂದ ಕರೆ ನೀಡಿದ್ದ ಬಂದ್ ಹಿನ್ನಲೆಯಲ್ಲಿ ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಬೆಳಿಗ್ಗೆಯಿಂದ ಬ್ಯಾಂಕ್, ಹೊಟೇಲ್, ಅಂಗಡಿಗಳು ಬಾಗಿಲು ಮುಚ್ಚಿದ್ದವು.ಬಂದ್ ಹಿನ್ನಲೆಯಲ್ಲಿ ಪಟ್ಟಣದ ಖಾಸಗಿ ಶಾಲೆಗಳು ಮುಂಚಿತವಾಗಿ ರಜೆಯನ್ನು ಘೋಷಿಸಿದ್ದವು.

ಬೆಳಿಗ್ಗೆ 9 ಗಂಟೆ ನಂತರ ಸರಕಾರಿ ಬಸ್ಗಳು ಮತ್ತು ಖಾಸಗಿ ವಾಹನಗಳ ಸಂಚಾರರದ್ದುಗೊಂಡಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅಟೋಗಳು ಸಹಿತರಸ್ತೆಗೆ ಇಳಿಯಲಿಲ್ಲ. ಸಂಜೆವರೆಗೆ ಅಂಗಡಿಗಳು ಮತ್ತು ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದವು.

ಪಟ್ಟಣದ ಝೇಂಡಾಕಟ್ಟೆ ಬಳಿ ಸೇರಿದ ವಿವಿಧ ಸಂಘಟನೆಗಳ ಮತ್ತು ರಾಜಕೀಯ ಮುಖಂಡರು ಸಾವಿರಾರು ಜನರೊಂದಿಗೆ ಘೋಷಣೆಗಳನ್ನು ಕೂಗುತ್ತ, ಕೈಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ಅವರ ಭಾವಚಿತ್ರಗಳನ್ನು ಹಿಡಿದು, ನೂರು ಮೀಟರ್ ಉದ್ದದರಾಷ್ಟ್ರಧ್ವಜವನ್ನು ಹಿಡಿದುಕೊಂಡು ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ನಡೆಸಿದರು.ಮತ್ತೆ ಮರಳಿ ಝೇಂಡಾಕಟ್ಟೆ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಮುಖಂಡರು, ಕೇಂದ್ರ ಸರಕಾರ ಜಾರಿಗೆ ತಂದ ಎನ್ಆರ್ಸಿ, ಎನ್ಪಿಆರ್ ಮತ್ತು ಸಿಎಎ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದುಗಳ ಜೊತೆಗೆ ಮುಸ್ಲಿಮರು ಕೂಡ ಹೋರಾಟ ನಡೆಸಿದ್ದಾರೆ. ದೇಶದ ಸಂವಿಧಾನದೇಶದ ಪ್ರಜೆಗಳನ್ನು ಧರ್ಮ, ಜಾತಿ, ಲಿಂಗ, ಪ್ರದೇಶಗಳ ಆಧಾರ ಮೇಲೆ ಯಾರನ್ನು ತಾರತ್ಯಮ ಮಾಡದೇ ಎಲ್ಲರನ್ನು ಸಮಾರನ್ನಾಗಿ ಕಾಣುವಂತೆ ಹೇಳಿದೆ. ಆದರೆ ಇಂದು ಕೇಂದ್ರ ಸರಕಾರ ಎನ್ಆರ್ಸಿ ಮತ್ತು ಸಿಎಎ ಕಾನೂನು ಜಾರಿ ಮಾಡುವುದರ ಮೂಲಕ ದೇಶವನ್ನುಒಡೆಯಲು ಹೊರಟಿರುವುದು ಎಷ್ಟು ಸರಿ, ಆಧಾರ ಮತ್ತು ಚುನಾವಣೆ ಗುತರ್ಿನಚೀಟಿ ಇರುವಾಗ ಮತ್ತೊಂದು ದಾಖಲೆ ಅವಶ್ಯಕವೇ ಎಂದು ಪ್ರಶ್ನಿಸಿದರು. ನಾವು ಯಾವುದೇ ಧರ್ಮ, ಮತ, ಜಾತಿ, ಲಿಂಗದವರಾಗಿದ್ದರೂ ಕೂಡ, ನಾವು ಮನೆಯಿಂದ ಹೊರಬಂದಕೂಡಲೇ ನಾವೆಲ್ಲರೂ ಮೊದಲು ಭಾರತೀಯರು. ರಾಷ್ಟ್ರಪ್ರೇಮ ಕಾಗದಗಳ ಮೂಲಕ ಬರುವುದಿಲ್ಲ. ಅದು ನಮ್ಮ ರಕ್ತದ ಕಣಕಣಗಳಿಂದ ಬಂದಿದೆ. ಅಂಬೇಡ್ಕರ್ರವರು ರಚಿಸಿದ ಸಂವಿಧಾನದ ಆಶಯವಾದ ಸಮಾನತೆ, ಸ್ವತಂತ್ರ ಮತ್ತು ದೇಶದ ಅಖಂಡತೆಯನ್ನು ಕಾಪಾಡಲು ಇಂದು ನಾವೆಲ್ಲರೂ ಶಾಂತಿಯಿಂದ ಹೋರಾಟ ನಡೆಸಲು ಬೀದಿಗೆ ಬಂದಿದ್ದೇವೆ ಎಂದರು.

ಝೇಂಡಾಕಟ್ಟೆ ವೃತ್ತದಲ್ಲಿ ರಸ್ತೆಗಳನ್ನು ಬಂದ್ ಮಾಡಿದ ಪ್ರತಿಭಟನಾಕಾರರು, ಬಿಸಿಲನ್ನು ಲೇಕ್ಕಿಸದೇ ಮಧ್ಯಾಹ್ನ 3 ಗಂಟೆವರೆಗೆರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಚಂದ್ರಕಾಂತ ಭಜಂತ್ರಿಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವುದರ ಮೂಲಕ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಯಿತು.

ಸಿಪಿಐ ಕೆ.ಎಸ್.ಹಟ್ಟಿ ನೇತೃತ್ವದಲ್ಲಿ ಪಟ್ಟಣದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.ಪ್ರತಿಭಟನೆಯಲ್ಲಿ ರಾಯಬಾಗ ಬ್ಲಾಕ್ ಕಾಂಗ್ರೇಸ್ ಕಮೀಟಿ ಅಧ್ಯಕ್ಷ ಈರಗೌಡ ಪಾಟೀಲ, ಮೌಲಾನಾ ಅಜೀಮ್, ಮೌಲಾನಾ ಇಮ್ತಿಯಾಜ್,ಅಬ್ಬಾಸ್ ಮುಲ್ಲಾ, ಹಾಜಿ ಮುಲ್ಲಾ, ಫಾರೂಖ ಮೊಮಿನ, ರಾಜು ಶಿರಗಾಂವೆ, ನಾಮದೇವ ಕಾಂಬಳೆ, ಅಪ್ಪಾಸಾಬ ಕುಲಗುಡೆ, ಅಯ್ಯುಬ್ ಮುಲ್ಲಾ, ಧೂಳಗೌಡ ಪಾಟೀಲ, ರಾಜು ತಳವಾರ, ಎಮ್.ಎಲ್.ಮೊಹಿತೆ,ಬಿ.ಎನ್.ಬಂಡಗಾರ, ಸತ್ತಾರ ಮುಲ್ಲಾ, ಡಿ.ಎಚ್.ಯಲ್ಲಟ್ಟಿ, ಬಿ.ಎಮ್.ಮುಲ್ಲಾ,ಯೂನಿಸ್ ಅತ್ತಾರ ಸೇರಿದಂತೆ ಸಾವಿರಾರೂಜನರು ಪಾಲ್ಗೊಂಡಿದ್ದರು.

ಸುದ್ದಿ ಓದಿ