ಊಟಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
ಕೊಯಮತ್ತೂರು, ಆಗಸ್ಟ್ 3 ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಊಟಿಗೆ ಆಗಮಿಸಿದರು.
ಚೆನ್ನೈನಿಂದ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿಯ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿಯವರನ್ನು ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಬರ ಮಾಡಿಕೊಂಡರು.
ನಾಳೆ, ವೆಲ್ಲಿಂಗ್ಟನ್‌ನಲ್ಲಿನ ಸೇನಾ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗವಹಿಸಲಿದ್ದಾರೆ ನಂತರ ಊಟಿಯಲ್ಲಿನ ಕೆಲವು ಪ್ರವಾಸಿ ತಾಣಗಳಿಗೂ ಭೇಟಿ ನೀಡಲಿದ್ದಾರೆ.
ನಂತರ ಇದೇ 6 ರಂದು ರಾಷ್ಟ್ರಪತಿ ನವದೆಹಲಿಗೆ ತೆರಳುಲಿದ್ದಾರೆ ಅವರ ಭೇಟಿ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಿದ್ದಾರೆ ರಾಷ್ಟ್ರಪತಿಯವರು ನಿನ್ನೆ ಮಾಜಿ ಮುಖ್ಯಮಂತ್ರಿಎಂ ಕರುಣಾನಿಧಿಯ ಭಾವಚಿತ್ರ ಅನಾವರಣಗೊಳಿಸಿ, ತಮಿಳುನಾಡು ಶಾಸನಸಭೆಯ ಶತಮಾನೋತ್ಸವ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಿದ್ದರು .