ರಾಷ್ಟ್ರಪತಿಯವರ ತಮಿಳುನಾಡು ಪ್ರವಾಸ : 5 ದಿನಗಳ ಭೇಟಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿ

ರಾಷ್ಟ್ರಪತಿಯವರ ತಮಿಳುನಾಡು ಪ್ರವಾಸ : 5 ದಿನಗಳ ಭೇಟಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿ

  ಚೆನ್ನೈ, ಆಗಸ್ಟ್ 02 ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಐದು ದಿನಗಳ ಭೇಟಿಗಾಗಿ ತಮಿಳುನಾಡಿಗೆ ಸೋಮವಾರ ಆಗಮಿಸಿದರು.
  ರಾಷ್ಟ್ರಪತಿಯವರನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, , ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಮಂತ್ರಿಗಳು, ವಿಧಾನಸಭೆ ಸ್ಪೀಕರ್ ಎಂ ಅಪ್ಪಾವು, ಸಂಸದರು, ಮುಖ್ಯ ಕಾರ್ಯದರ್ಶಿ, ರಾಜ್ಯ ಡಿಜಿಪಿ, ಚೆನ್ನೈ ನಗರ ಪೊಲೀಸ್ ಆಯುಕ್ತರು ಮತ್ತು ಇತರ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
  ಐದು ದಿನಗಳ ಭೇಟಿಯಲ್ಲಿ ತಮಿಳುನಾಡು ವಿಧಾನಸಭೆಯ ಶತಮಾನೋತ್ಸವ ಆಚರಣೆಯ ಸ್ಮರಣಾರ್ಥ ಮತ್ತು ವಿಧಾನಸಭಾ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಸೋಮವಾರ ಭಾಗವಹಿಸಲಿದ್ದಾರೆ.
  ಒಂದು ಗಂಟೆಯ ಕಾರ್ಯಕ್ರಮದ ನಂತರ, ರಾಷ್ಟ್ರಪತಿಯವರು ರಾಜಭವನಕ್ಕೆ ತೆರಳಿ ತಂಗಲಿದ್ದಾರೆ. ನಾಳೆ, ನೀಲಗಿರಿ ಜಿಲ್ಲೆಯ ಸೂಲೂರು ಏರ್‌ಫೀಲ್ಡ್‌ಗೆ ತೆರಳಲಿದ್ದಾರೆ.
  ಆಗಸ್ಟ್ ನಾಲ್ಕರಂದು, ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್ 5 ರಂದು ಅವರು ಊಟಿಯಲ್ಲಿನ ಕೆಲವು ಜನಪ್ರಿಯ ಪ್ರವಾಸಿ ಸ್ಥಳಗಳಿಗೆ ಭೇಟಿ ಮಾಡುವ ನಿರೀಕ್ಷೆಯಿದೆ. ಆಗಸ್ಟ್ 6ರಂದು ಚೆನ್ನೈಗೆ ತೆರಳಿ ಅಲ್ಲಿಂದ ದೆಹಲಿಗೆ ವಾಪಸಾಗಲಿದ್ದಾರೆ. 

ಸುದ್ದಿ ಓದಿ