ಕುಕನೂರ್

ಕುಕನೂರ ಅನ್ನದಾನೀಶ್ವರ ಮಠದ ಜಾತ್ರೆಯ ಪೂರ್ವಭಾವಿ ಸಭೆ

ಕುಕನೂರ ಅನ್ನದಾನೀಶ್ವರ ಮಠದ ಜಾತ್ರೆಯ ಪೂರ್ವಭಾವಿ ಸಭೆ

ಲೋಕದರ್ಶನ ವರದಿ 

ಕುಕನೂರ 04: ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಮಠದ ಲಿಂ. 09ನೇ ಜಗದ್ಗುರುಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆಯುವ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಶ್ರೀಮಠದಲ್ಲಿ ನಡೆಯಿತು.  

         

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಮಲ್ಲಯ್ಯ ಮುಳಗುಂದಮಠ ಎರಡು ವರ್ಷಗಳಿಂದ ಜಾತ್ರೆಯನ್ನ ಅತ್ಯಂತ್ಯ ಸರಳವಾಗಿ ಆಚರಣೆ ಮಾಡಲಾಗಿತ್ತು ಆದರೆ ಈ ವರ್ಷ ಅತ್ಯಂತ್ಯ ಸಂಭ್ರಮದಿಂದ ಜಾತ್ರೆಯನ್ನ ಮಾಡಲು ಭಕ್ತರು ಉತ್ಸುಕರಾಗಿದ್ದರೆ. ದಿ.  27ರಿಂದ 16ರವರೆಗೆ ಜಾತ್ರ ಅಂಗವಾಗಿ ಬಸವ ಪುರಾಣ, ಸಾಮೂಹಿಕ ವಿವಾಹ, ಅನ್ನದಾನೀಶ್ವರ ಪ್ರಶಸ್ತ್ರಿ, 21ಜನ ಸಾಧಕರಿಗೆ ಬಸವ ಪ್ರಶಸ್ತ್ರಿ, 21 ಜನ ಪೂಜ್ಯರಿಗೆ ಗುರುವಂದನೆ, ಅಯ್ಯಾಚಾರ, ಕೃತಿ ಬಿಡುಗಡೆ, ಪಾದಯಾತ್ರೆ, ಜಂಗಮೋತ್ಸವ ಮತ್ತ ಲಘು ರಥೋತ್ಸವ ಜರುವುದು ಎಂದರು. 

      

ನಂತರ ಮಾತನಾಡಿದ ಜಾತ್ರಾ ಸಮಿತಿ ಅಧ್ಯಕ್ಷ ಗದಿಗೆಪ್ಪ ಪವಾಡಶೆಟ್ಟಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವು ಜಾತ್ರೆ ಈ ನಾಡಿನ ಹರ ಗುರು ಚರ ಮೂರ್ತಿಗಳ ಸಾನೀಧ್ಯದಲ್ಲಿ ಶ್ರೀಮಠದ ಜಗದ್ಗುರು ಮಹಾಸನ್ನಿಧಿಯವರ ಅಪ್ಪಣೆಯಂತೆ ಮತ್ತು ಭಕ್ತರ ಇಚ್ಚೆಯಂತೆ ನಡೆಯುತ್ತದೆ, ಅನ್ನದಾನೀಶ್ವರ ಪ್ರಶಸ್ತಿಗೆ ಸಮಾಜ ಸೇವಕ ಕಳಕಪ್ಪ ಕಂಬಳಿಯವರನ್ನ ಆಯ್ಕೆ ಮಾಡಲಾಗಿದೆ ಈ ಪ್ರಶಸ್ತಿಯು ನಗದು ಹಣ, ಬೆಳ್ಳಿಯ ರುದ್ರಾಕ್ಷಿ ಸರ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನ ಹೊಂದಿರುತ್ತದೆ ಎಂದರು. 

   ನೇತೃತ್ವ ವಹಿಸಿ ಮಾತನಾಡಿದ ಪೂಜ್ಯ ಡಾ ಮಹಾದೇವ ದೇವರು ಭಕ್ತರ ನೇತೃತ್ವದಲ್ಲಿ ಜಾತ್ರೆ ನಡೆಯಲಿದ್ದು ಎಲ್ಲಾರ ಸಹಕಾರ ಅವಶ್ಯ ಎಂದರು. 


ಈ ಸಂಧರ್ಭದಲ್ಲಿ ಈರ​‍್ಪ ಮ್ಯಾಳಿ, ವಿ ಜಿ ಬಳಗೆರಿ, ಚಂದ್ರಶೇಖರಯ್ಯ ಸರಗಣಾಚಾರ, ವೀರಯ್ಯ ತೋಂಟದಾರ್ಯಮಠ, ಕಾಶೀಂ ಸಾಭ ಸಂಗಟಿ, ಕಲ್ಲಪ್ಪ ಅಳವಂಡಿ, ಶರಣಪ್ಪ ಮಳಿಗಿ, ಬೀಮಪ್ಪ ಬಾರಕೇರ, ಬಸಪ್ಪ ಬಂಗಿ, ಸಂಗಮೇಶ ಕಲ್ಮಠ, ಜಾಲಿಂದರ ಮೊಹಿತೆ, ಸಂಗಪ್ಪ ಗುತ್ತಿ, ದೇವೆಗೌಡ ಮಡಿವಾಳರ, ಜಗದೀಶಯ್ಯ ಕಳ್ಳಿಮಠ, ಶೇಖಪ್ಪ ಶಿರೂರ, ರಾಮಣ್ಣ ಬೆದವಟ್ಟಿ, ಗುದ್ನಪ್ಪ ಹೊಸಮನಿ, ಅಶೋಕ ಕಟಿಬಿ ಮತ್ತು ಇತರರು ಇದ್ದರು 


ಸುದ್ದಿ ಓದಿ