ಸಿರುಗುಪ್ಪ

75ನೇ ಸ್ವಾತಂತ್ರ್ಯ ದಿನದ ಪೂರ್ವಭಾವಿ ಸಭೆ

75ನೇ ಸ್ವಾತಂತ್ರ್ಯ ದಿನದ ಪೂರ್ವಭಾವಿ ಸಭೆ

ಸಿರುಗುಪ್ಪ 08: ತಾಲ್ಲೂಕು ಆಡಳಿತ ಎಪ್ಪತ್ತೈದನೇ ಸ್ವಾತಂತ್ರ್ಯ ದಿನವನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಲ್ಲದೆ ಸರಳ ಸಂಭ್ರಮ ದಿಂದ ಆಚರಿಸಲು ನಿರ್ಧರಿಸ ಲಾಗಿದೆ ಎಂದು ತಹಶೀಲ್ದಾರ್ ಎನ್‌. ಆರ್‌. ಮಂಜುನಾಥ ಸ್ವಾಮಿ ಹೇಳಿದರು.ನಗರದ ತಾಲ್ಲೂಕು ಕಚೇರಿ ಮಿನಿ ವಿಧಾನ ಸೌಧದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ನೆರವೇರಿಸಿ ಕಡ್ಡಾಯವಾಗಿ ನಗರದ ತಾಲ್ಲೂಕು ಕ್ರೀಡಾ ಮೈದಾನದಲ್ಲಿ ಬೆಳಿಗ್ಗೆ 9ಗಂಟೆಗೆ ಜರುಗುವ 75ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಸಮಾರಂಭ ದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು . ಸಹಾಯಕ ಕೃಷಿ ನಿರ್ದೇಶಕ ಎನ್‌. ನಜೀರ್ ಅಹ್ಮದ್ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಡಿ .ಭಜಂತ್ರಿ ತೋಟ ಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ ಗೌಡ ಬಿಸಿಎಂ ಅಧಿಕಾರಿ ಎ. ಗಾದಿಲಿಂಗಪ್ಪ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಎಂ .ಸಿದ್ದಯ್ಯ ಪೊಲೀಸ್ ಸಬ್ ಇನ್ಸ್‌ ಪೆಕ್ಟರ್ ಕೆ .ರಂಗಯ್ಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿದ್ಯಾ ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಈರಣ್ಣ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ದೇವರಾಜ್ ಮಹಿಳಾ ಮತ್ತು ಮಕ್ಕಳ ಶಿಶು ಅಭಿವದ್ಧಿ ಯೋಜನಾಧಿಕಾರಿ ಎ. ಜಲಾಲಪ್ಪ ಸಾಮಾಜಿಕ ಕಾರ್ಯಕರ್ತ ಎ.ಅಬ್ದುಲ್ ನಬಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗ ವಹಿಸಿದ್ದರು. ಸಿರುಗುಪ್ಪ ನಗರದಲ್ಲಿ ನಡೆಯುವ ಅಮೃತ ಮಹೋತ್ಸವ 75ನೇ ಸ್ವಾತಂತ್ರ್ಯ ದಿನಾ ಚರಣೆ ಕಾರ್ಯಕ್ರಮ ಸಮಾರಂಭ ಸಂದರ್ಭದಲ್ಲಿ ಗಣ್ಯರಿಗೆ ರಾಷ್ಟ್ರೀಯ  ಧ್ವಜ ಬ್ಯಾಡ್ಜ್‌ ಗಳನ್ನು ತಾಲ್ಲೂಕ ಮಟ್ಟದ ಅಧಿಕಾರಿಗಳಿಗೆ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ಸಿಬ್ಬಂದಿ ವರ್ಗದವರಿಗೆ ಜನ ಪ್ರತಿ ನಿಧಿಗಳಿಗೆ ಮಕ್ಕಳಿಗೆ ವಿತರಿಸುವ ದಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರು ಹಾಗೂ ಸಾಮಾಜಿಕ ಸುಧಾರಕ ಎ .ಅಬ್ದುಲ್ ನಬಿ ಅವರು ತಿಳಿಸಿದರು. 


ಸುದ್ದಿ ಓದಿ