ಪ್ರಾರ್ಥನೆ,,,
-ಪ್ರಭಾ .ಅ. ಪಾಟೀಲ
ಆಂಜನೇಯ ನಗರ ಬೆಳಗಾವಿ
ಶರಣೆಂಬೆ ನಾ ಶ ಶಿಬುಷಣಾ
ಗೌರಿ ಪ್ರೀಯಾ ಜಗನ ಮೋಹನಾ ಎಂದು ಭರವಸೆ ಇಟ್ಟು ಪ್ರಾರ್ಥನೆ ಸಲ್ಲಿಸಿದರೆ ಸಾಕು ಮನಸ್ಸು ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ.
ಪ್ರತಿಯೊಂದು ಧರ್ಮವು ಪ್ರಾರ್ಥನೆಗೆ ಹೆಚ್ಚಿನ ಮಹತ್ವ ನೀಡುವವು ಪ್ರಾರ್ಥನೆಯನ್ನು ಮಾಡುವುದರಿಂದ ಬದುಕಿನಲ್ಲಿ ನಾವು ಶಕ್ತಿಯನ್ನು ಗಳಿಸಬಹುದು ಕೋಟಿ ಕೋಟಿ ಜನರು ಪ್ರಾರ್ಥನೆ ಮಾಡುವರು ಅವರು ತಮ್ಮ ಜೀವನದಲ್ಲಿ ಸಂತೋಷ ಶಕ್ತಿ ನೆಮ್ಮದಿಯನ್ನುಗಳಿಸಿಕೊಳ್ಳಲು ಪ್ರಾರ್ಥನೆ ಸಹಕಾರಿಯಾಗುತ್ತದೆ ಎಂದು ಚರಿತ್ರೆ ಹೇಳುತ್ತಾ ಬಂದಿದೆ.
ಇನ್ನು ಪ್ರಾರ್ಥನೆ ಹೇಗಿರಬೇಕು
ಸಂಕಟ ಬಂದಾಗ ವೆಂಕಟರಮಣ ಎಂದು ಕಷ್ಟಗಳು ಎದುರಾದಾಗ ಮಾತ್ರ ಪ್ರಾಥರ್ಿಸಿದೆ ದಿನಾ ಬೆಳಿಗ್ಗೆ ಎದ್ದು ಶುಚಿಭೂತರಾಗಿ ರಾಗಿ ನಿರ್ಮಲ ಮನಸ್ಸಿನಿಂದ ನಮ್ಮಿಂದ ಈ ದಿನ ಯಾರಿಗೂ ಕೆಡುಕಾಗದಿರಲಿ ನಮ್ಮ ಕೈಯಿಂದ ಈ ದಿನ ಒಳ್ಳೆಯ ಕಾರ್ಯವ ಮಾಡಿಸು ದೇವ ಎಂದು ಅಂದುಕೊಂಡರೆ ಆಯಿತು ಮನಸ್ಸು ನಿರಾಳವಾಗಿ ಅಂದಿನ ದಿನಚರಿ ಹರ್ಷದಿಂದ ಕೂಡಿರುತ್ತದೆ.
ನನಗೆ ಲಾಟರಿ ಹೊಡಿಬೇಕು 10 ಲಕ್ಷ ಹಣ ಒಮ್ಮೆಲೆ ಬರಬೇಕು ನನ್ನ ಶತ್ರುಗಳು ನಾಶವಾಗಿ ಹೋಗ್ಲಿ ಈ ಜಗತ್ತಿನಲ್ಲಿ ನಾನು ಮಾತ್ರ ಸುಖವಾಗಿ ಇರಬೇಕು,,,,,, ಈ ರೀತಿ ಪ್ರಾರ್ಥನೆಗಳು ದೇವರಿಗೆ ಸಲ್ಲುವುದಿಲ್ಲ ದೇವರು ಒಲಿಯುವುದಿಲ್ಲ ನಮ್ಮ ಮನದ ಬಯಕೆಗಳ ನಿಯತ್ತಾಗಿ ಇರುವಾಗ ಮಾತ್ರ ದೇವರು ಯಾವುದೋ ಒಂದು ದಾರಿಯಲ್ಲಿ ಬಂದು ನಮ್ಮನ್ನು ಖಂಡಿತವಾಗಿಯೂ ಕಾಪಾಡುತ್ತಾನೆ ಬಯಸಿದ್ದನ್ನು ನೀಡುತ್ತಾನೆ ಅವನಿಗೆ ಅಂತಹ ದಿವ್ಯವಾದ ಶಕ್ತಿ ಇದೆ ನಂಬಿಕೆಗೆ ಎಲ್ಲಕ್ಕಿಂತ ತುಂಬಾ ಮುಖ್ಯ.
ಎಲ್ಲರ ಬದುಕಿನಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ ಅವುಗಳನ್ನು. ಎದುರಿಸಿ ಗೆಲುವು ಪಡೆಯುವ ಧೈರ್ಯ ತುಂಬುವ ಕೆಲಸ ಮಾಡುವ ಶಕ್ತಿಯನ್ನು ಹೊಂದಿದೆ ಪ್ರಾರ್ಥನೆ.
ಪ್ರಾರ್ಥನೆ ಎನ್ನುವುದು ವೈಯಕ್ತಿಕ ವಿಚಾರ ಯಾವುದೇ ಧರ್ಮ ಕುಲಗಳಿಗೆ ಮಾತ್ರ ಸೇರಿರುವುದು ಆಗಿಲ್ಲ ಅವರೀಗೆ ನಂಬಿಕೆ ಇರುವಂತೆ ಪ್ರಾರ್ಥನೆ ಮಾಡಬಹುದು.
ಪ್ರಾರ್ಥನೆ ಮೇಲೊಂದು ಗೀತೆ
ಬನ್ನಿ ರೆಲ್ಲ ಬನ್ನಿ ಪ್ರಾರ್ಥನೆ ಮಾಡೋಣ
ಆ ದೇವನ ಬೇಡೋಣ
ಈ ಜಗದಲಿ ಶಾಂತಿ ನೆಮ್ಮದಿ ನೀಡೆಂದು ಕೇಳೋಣ
ಹೆಣ್ಣು ಗಂಡು ಸಮಾನರಾಗಗಿಲೆಂದು
ಬೇಡೋಣ
ಬಡತನದಲ್ಲಿ ಸಿರಿತನದಲ್ಲಿ
ಒಂದೇ ಸಮನೆ ಇರುವ ಶಕ್ತಿಯನ್ನು ನೀಡೆಂದು ಕೇಳೋಣ
ಮನುಜರೆಲ್ಲರ ಮನದ
ಕತ್ತಲೆಯ ಕಳೇಯಲು ಪ್ರಾರ್ಥನೆ ಮಾಡೋಣ ಪ್ರಾರ್ಥನೆ ಮಾಡೋಣ ಪ್ರಾರ್ಥನೆ ಮಾಡೋಣ.