ಮಹಲಿಂಗಪುರ

ಬಡತನ ಶಾಪವಲ್ಲ ವರ, ನಿಮ್ಮೊಂದಿಗೆ ನಾವಿದ್ದೇವೆ : ಡಾ. ಮಾರುತಿ ಮೇದಾರ

ಬಡತನ ಶಾಪವಲ್ಲ ವರ, ನಿಮ್ಮೊಂದಿಗೆ ನಾವಿದ್ದೇವೆ : ಡಾ. ಮಾರುತಿ ಮೇದಾರ

ಮಕ್ಕಳ ಕನಸಿಗೆ ರೆಕ್ಕೆಯಾದ ಲಯನ್ಸ್‌ ಕ್ಲಬ್ ಪ್ರತಿಷ್ಠಿತರು: ಹಾಡಿ ಕುಣಿದ ಮಕ್ಕಳು 

ವರದಿ: ಹನಮಂತ ನಾವಿ 

ಮಹಾಲಿಂಗಪುರ 01 : ಕಳೆದ 9 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಕ್ರೀಡೆ ಮುಂತಾದ ರಂಗಗಳಲ್ಲಿ ನಿರಂತರ ನಿಸ್ವಾರ್ಥ ಸೇವೆಗೈಯ್ಯುತ್ತಾ ಮಾದರಿಯಾಗಿರುವ ಲಯನ್ಸ್‌ ಕ್ಲಬ್ ಆಫ್ ಗ್ರೀನ್ ಬೇಸಿನ್ ಮಹಾಲಿಂಗಪುರ ವತಿಯಿಂದ ಅಧ್ಯಕ್ಷ ಡಾ.ಮೇದಾರ ಅವರ ನೇತೃತ್ವದಲ್ಲಿ ಸ್ಥಳೀಯ ಸರ್ಕಾರಿ ಶಾಲೆಯೊಂದರ ಬಡ ಮಕ್ಕಳ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿಯಾಗಬಲ್ಲ ಡಂಬಲ್ಸ್‌ ಮತ್ತು ಲೇಜಿಮ್ಸ್‌ ನೀಡಿ ಬಡ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಲಾಯಿತು . 

ಪ್ರತಿಷ್ಠಿತ ವೈದ್ಯರು, ಉದ್ದಿಮೆದಾರರು, ವಕೀಲರು ಮುಂತಾದ ಉನ್ನತ ಸ್ಥಾನದಲ್ಲಿರುವ ಲಯನ್ಸ್‌ ಕ್ಲಬ್‌ನ ಪದಾಧಿಕಾರಿಗಳು ಗಣರಾಜ್ಯೋತ್ಸವದ ಪ್ರಯುಕ್ತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕೆಂಗೇರಿಮಡ್ಡಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಮಕ್ಕಳಿಗೆ ಸಿಹಿ ಹಂಚಿ 30 ಜೊತೆ ಡಂಬಲ್ಸ್‌ ಹಾಗೂ 30 ಲೇಜಿಮ್ಸ್‌ ನೀಡಿ, ಲೇಜಿಮ್ಸ್‌ ಮತ್ತು ಡಂಬಲ್ಸ್‌ ಹಿಡಿದು ಹೆಜ್ಜೆ ಹಾಕಿ ಹಾಡಿ ಕುಣಿದ ಮಕ್ಕಳ ಮುಖದಲ್ಲಿನ ಹರುಷ ಕಂಡು ಕೃತಾರ್ಥರಾದರು.  

ಕ್ಲಬ್‌ನ ಉಪಾಧ್ಯಕ್ಷ ರಾಜು ತಾಳಿಕೋಟಿ, ಸದಸ್ಯರಾದ ಡಾ.ಅಶೋಕ ದಿನ್ನಮನಿ, ಡಾ.ವಿಶ್ವನಾಥ ಗುಂಡಾ, ಸಂಜು ಅಂಬಿ, ಸಚಿನ್ ಗುಂಡಾ, ಸಾಗರ ಅವರಾದಿ, ಹುಚ್ಚೇಶ ವಡ್ಡರ, ಡಾ.ವೆಂಕಟೇಶ ಬುರುಡ,ಡಾ.ರಮೇಶ ಶೆಟ್ಟರ್,ಪ್ರಕಾಶ ತಾಳಿಕೋಟಿ, ಸಿದ್ದು ನಕಾತಿ, ಪ್ರಶಾಂತ ಅಂಗಡಿ, ಡಾ.ಶಕುಂತಲಾ ಸಂಶಿ, ಡಾ. ಸುರೇಖಾ ಚನ್ನಾಳ, ಡಾ.ವಿದ್ಯಾ ದಿನ್ನಿಮನಿ, ಪ್ರಿಯಾಂಕ ಕೋಳಿಗುಡ್ಡ, ಶೈಲಾ ಶೆಟ್ಟರ, ಕಿರಣ್ ಸಣ್ಣಕ್ಕಿ ಇತರರು ಮುಖ್ಯೋಪಾಧ್ಯಾಯ ಕೆ.ಎಂ.ಕಾಳವ್ವಗೋಳ ಅವರ ನೇತೃತ್ವದಲ್ಲಿ ದೇಣಿಗೆ ನೀಡಿದರು.  

ಬಡತನ ಶಾಪವಲ್ಲ ಅದು ಭಗವಂತ ಕೊಟ್ಟ ವರ, ಬಡತನ ಕಲಿಸುವ ವಿದ್ಯೆಯನ್ನು ಯಾವ ವಿಶ್ವ ವಿದ್ಯಾಲಯವೂ ಕಲಿಸಲಾರದು ಆ ನಿಟ್ಟನಲ್ಲಿ ನೀವು ಅದೃಷ್ಟವಂತರು, ಜಗತ್ತಿನ ಬಹುತೇಕ ಸಾಧಕರು ಗುಡಿಸಿಲಿನಿಂದಲೇ ಬಂದವರು, ನಾವೂ ಬಡತನದಲ್ಲೆ ಹುಟ್ಟಿ, ಸರ್ಕಾರಿ ಶಾಲೆಯಲ್ಲಿಯೇ ಕಲಿತು ಇಂದು ನಿಮ್ಮ ಮುಂದೆ ನಿಂತಿದ್ದೇವೆ, ನೀವು ಮುನ್ನುಗ್ಗಿ ನಿಮ್ಮ ಜೊತೆ ನಾವದ್ದೇವೆ.

ಡಾ.ಮಾರುತಿ ಮೇದಾರ,

ಅಧ್ಯಕ್ಷರು, ಲಯನ್ಸ್‌ ಕ್ಲಬ್, ಮಹಾಲಿಂಗಪುರ. 


ಸುದ್ದಿ ಓದಿ