ಉದ್ಯಮಬಾಗ ಪೊಲೀಸರ ದಾಳಿ : ಅಕ್ರಮ ಸಾರಾಯಿ ಸಾಗಾಟಗಾರನ ಬಂಧನ : 7.52 ಲಕ್ಷ ಮೌಲ್ಯದ ಮದ್ಯ, ವಾಹನ ವಶ
ಬೆಳಗಾವಿ : ಅಕ್ರಮವಾಗಿ ಗೋವಾ ರಾಜ್ಯದ ಮದ್ಯ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿರುವ ಬೆಳಗಾವಿಯ ಉದ್ಯಮಭಾಗ ಪೊಲೀಸರು ಓರ್ವ ಆರೋಪಿತನನ್ನು ಬಂಧಿಸಿ, ಆತನಿಂದ 7.52,260 ರೂ. ಮೌಲ್ಯದ ಮದ್ಯ ಹಾಗೂ ಸಾರಾಯಿ ಸಾಗಾಟಕ್ಕೆ ಉಪಯೋಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಿ. 23ರಂದು ಮಜಗಾವಿಯ 5ನೇ ರೇಲ್ವೆ ಗೇಟ್ ಹತ್ತಿರ ವಾಹನ ಒಂದಲ್ಲಿ ಗೋವಾ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಖಡೇಬಜಾರ್ ಎಸಿಪಿ ಅರುಣಕುಮಾರ ಕೋಲೂರು ಇವರ ಮಾರ್ಗದರ್ಶನದಲ್ಲಿ ಉದ್ಯಮಬಾಗ ಠಾಣೆ ಪೊಲೀಸ್ ಇನ್ಸಪೆಕ್ಟರ್ ಆರ್.ಎಸ್ ಬಿರಾದಾರ ಮತ್ತು ಸಿಬ್ಬಂದಿಗಳಾದ ಪಿಎಸ್ ಐ ಶ್ರೀಮತಿ ಜಿ.ಎನ್.ಗುರ್ಲಹೊಸೂರ ಮತ್ತು ಟಿ.ಬಿ ಕುಂಚನೂರ, ಶ್ರೀಮತಿ ಎ.ಎಮ್.ಕಾಂಬಳೆ, ಭರಮಾ ಕರೆಗಾರ, ಸಿ.ಎಸ್.ಹಂಚಿನಾಳ, ಆನಂದ ಬಿದನೂರ, ಐ.ಎಮ್ ಚವಲಗಿ, ಎಸ್.ಎ.ಕರ್ಕಿ ಇವರನ್ನೊಳಗೊಂಡ ತಂಡವು ದಾಳಿ ಮಾಡಿ ಸುಮಾರು 7.52,260 ರೂಪಾಯಿ ಮೌಲ್ಯದ ಮದ್ಯ ಮತ್ತು ವಾಹನ ಸಂಖ್ಯೆ ಕೆಎ-22-ಸಿ-8545 ಅನ್ನು ವಶಪಡಿಸಿಕೊಂಡಿರುತ್ತಾರೆ.
ಈ ಅಕ್ರಮದಲ್ಲಿ ಭಾಗಿಯಾದ ಆರೋಪಿ ಪರಸರಾಮ ಬಾಹುರಾವ ಪೆಟ್ಟೇಕರ, ವಯಸ್ಸು-31 ವರ್ಷ ಸಾ.ಹೊಸೂರ ಬಸವನಗಲ್ಲಿ ಖಾಸಭಾಗ ಶಹಾಪೂರ ಈತನಿಗೆ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರೆಸಲಾಗಿದೆ.
ಈ ದಾಳಿಯಲ್ಲಿ ಭಾಗಿಯಾದ ಉದ್ಯಮಬಾಗ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯಾ ಹಾಗೂ ಪೊಲೀಸ್ ಉಪ ಆಯುಕ್ತರಾದ ಶೇಖರ್, ಸ್ನೇಹಾ ಪಿವ್ಹಿ ಇಬರು ಶ್ಲಾಘಿಸಿರುತ್ತಾರೆ.