ಮದುವೆ ಕಾರ್ಯಕ್ರಮಕ್ಕೆ ಪೊಲೀಸರ ಅಡ್ಡಿ : ಬಾಜಾಬಜಂತ್ರಿಯವರ ವಾಹನ ಸಮೇತ ಕೂಡಿಹಾಕಿ ದರ್ಪ

ಮದುವೆ ಕಾರ್ಯಕ್ರಮಕ್ಕೆ ಪೊಲೀಸರ ಅಡ್ಡಿ : ಬಾಜಾಬಜಂತ್ರಿಯವರ ವಾಹನ ಸಮೇತ ಕೂಡಿಹಾಕಿ ದರ್ಪ

ಬೆಳಗಾವಿ : ನಗರದಲ್ಲಿ ಮದ್ಯರಾತ್ರಿಯ ವರೆಗೆ ಬೆಳಗಾವಿಯಲ್ಲಿ ಮದ್ಯ ಮತ್ತು ಮಾಂಸಾಹಾರಿ ಅಂಗಡಿಗಳಿಗೆ ಅನುಮತಿ ನೀಡುವ ಬೆಳಗಾವಿ ಪೊಲೀಸರು ರಾತ್ರಿ 8.30ಕ್ಕೆ ಸುಮಾರಿಗೆ ನಡೆಯುತ್ತಿದ್ದ ಮದುವೆಯ ಕಾರ್ಯದಲ್ಲಿ ಅಡ್ಡಿಪಡಿಸುವ ಮೂಲಕ ಅಲ್ಲಿ ಹಚ್ಚಲಾಗಿದ್ದ ಬಾಜಾಭಜಂತ್ರಿಯವರ ವಾಹನ ಸಮೇತ ಠಾಣೆಗೆ ಕರೆದೊಯ್ಯದು ದರ್ಪ ಮೆರೆದ ಘಟನೆ ಗುರುವಾರ ರಾತ್ರಿ ಬೆಳಗಾವಿಯಲ್ಲಿ ನಡೆದಿದೆ. 

     ಬೆಳಗಾವಿಯ ಕೆಪಿಟಿಸಿಎಲ್ ಹಾಲ್ ನಲ್ಲಿ ಶುಕ್ರವಾರ ಮಾಧ್ಯಮ ವರ್ಗದ ಜನರ ಮದುವೆ ಕಾರ್ಯವನ್ನು ಹಮ್ಮಿಕೊಂಡಿದ್ದರು. ಅದರ ಮೊದಲ ದಿನವಾದ ಗುರುವಾರ ರಾತ್ರಿ 8.30ರ ಸುಮಾರಿಗೆ ಕೆಪಿಟಿಸಿಎಲ್ ಹಾಲ್ ನಲ್ಲಿ ಅರಸಿನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾಜಾಭಜಂತ್ರಿ (ಬ್ಯಾಂಡ್/ಬ್ಯಾಂಜೋ) ವಾದ್ಯದೊಂದಿಗೆ ಕಾರ್ಯಕ್ರಮ ಮದುವೆಯ ಮನೆಯವರು ಹಮ್ಮಿಕೊಂಡಿದ್ದರು. 

    ಆದರೆ ರಾತ್ರಿ 8.30ರ ಸುಮಾರಿಗೆ ಕೆಪಿಟಿಸಿಎಲ್ ಹಾಲ್ ಬಳಿ ಬಂದ ಮಾಳಮಾರುತಿ ಪೊಲೀಸರು ಅಲ್ಲಿದ್ದ ಭಾಜಾಭಜಂತ್ರಿಯವರ ವಾಹನ ಸಮೇತವಾಗಿ ಮಾಳಮಾರುತಿ ಠಾಣೆಗೆ ಕರೆದೊಯ್ಯದು ಕೆಲವು ಗಂಟೆಗಳ ಕಾಲ ಕೂಡಿ ಹಾಕಿರುವ ಆರೋಪ ಕೇಳಿಬಂದಿದೆ.

    ದಿನನಿತ್ಯ ತಡರಾತ್ರಿ 12ರಿಂದ  1 ಗಂಟೆಯವರೆಗೆ ಮಾಂಸಾಹಾರಿ ಹಾಗೂ ಮದ್ಯದ ಅಂಗಡಿಗಳಿಗೆ ಅನುಮತಿ ನೀಡುವ ಪೊಲೀಸರು ಮದುವೆ ಕಾರ್ಯ ಗಳಿಗೆ ಮಾತ್ರ 8.30ಕ್ಕೆ ತಡೆಯೊಡ್ಡಿ ಕಿರಿಕಿರಿ ಉಂಟು ಮಾಡುತ್ತಿರುವದು ಯಾವ ನ್ಯಾಯ ಎನ್ನುವದು ಜನಸಾಮಾನ್ಯರ ಪ್ರಶ್ನೆ ಯಾಗಿದೆ. 

   ಬೆಳಗಾವಿಯಲ್ಲಿ ದಿನನಿತ್ಯ ಅಪರಾಧ ಪ್ರಕರಣಗಳು ಹೆಚ್ವುತ್ತಲಿದ್ದರೂ ಅದರ ಬಗ್ಗೆ ತೆಲೆ ಕೆಡಿಸಿಕೊಳ್ಳದ ಪೊಲೀಸರು ಬಡಜನರ ಮದುವೆಯಂತ ಕಾರ್ಯಕ್ರಮ ಕ್ಕು ಕಣ್ಣ ಹಾಕುತ್ತಿರುವದು ನಾಗರಿಕರ ಆಕ್ರೋಶ ಕ್ಕೆ ಕಾರಣವಾಗುತ್ತಿದೆ. 

ಸುದ್ದಿ ಓದಿ